






ಬೆಳ್ತಂಗಡಿ: ದಸರಾ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಬೆಳ್ತಂಗಡಿಯಲ್ಲಿ ಆಯೋಜಿಸಿರುವ ‘ಡೈಮಂಡ್ ಫೆಸ್ಟ್’ ವಿಶೇಷ ಆಭರಣ ಮೇಳಕ್ಕೆ ಸ.02 ರಂದು ಚಾಲನೆ ಸಿಕ್ಕಿದೆ.

ಆಗಸ್ಟ್ 28ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಮೇಳವನ್ನು ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್ ಕುಳವರ್ಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮುಳಿಯ ಜುವೆಲ್ಸ್ ಎಂದರೆ ಮನೆತನದ ವಿಶ್ವಾಸ ಹಾಗೂ ನಗುಮೊಗದ ಸೇವೆಗೆ ಹೆಸರಾದ ಸಂಸ್ಥೆ.
ಸಂಸ್ಥೆಯ ಚಿನ್ನೋತ್ಸವ ಈಗ ಡೈಮಂಡ್ ಫೆಸ್ಟ್ ರೂಪದಲ್ಲಿ ನಡೆಯುತ್ತಿರುವುದು ಅದರ ಪ್ರಗತಿಗೆ ಸಾಕ್ಷಿಯಾಗಿದೆ. ವಜ್ರಾಭರಣ ಖರೀದಿಸಲು ಹಾಗೂ ವಿವಿಧ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಈ ಮೇಳ ಉತ್ತಮ ಅವಕಾಶ. ಮುಳಿಯದಲ್ಲಿ ವೈವಿಧ್ಯಮಯ ಆಭರಣಗಳ ಸಂಗ್ರಹವಿದ್ದು, ಲಭ್ಯವಿಲ್ಲದ ವಿನ್ಯಾಸಗಳನ್ನು ಕೂಡ ಗ್ರಾಹಕರ ಬೇಡಿಕೆಯಂತೆ ತರಿಸಿಕೊಡುವ ಸೌಲಭ್ಯವಿದೆ. ಸಂಸ್ಥೆ ಧರ್ಮ ಹಾಗೂ ನ್ಯಾಯದ ವ್ಯಾಪಾರಕ್ಕೆ ಬದ್ಧವಾಗಿ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, 82 ವರ್ಷಗಳಿಂದ ಮುಳಿಯ ಸಂಸ್ಥೆ ತಾಲೂಕಿನಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಕೊಡುಗೆ ಮಹತ್ವದ್ದಾಗಿದೆ. ಕೇವಲ ಆಭರಣ ಮಾರಾಟ ಮಾಡುವುದಲ್ಲದೆ, ಗ್ರಾಹಕರಿಗೆ ಆಭರಣಗಳ ವೈಶಿಷ್ಟ್ಯ ಹಾಗೂ ಗುಣಮಟ್ಟದ ಕುರಿತು ಮಾಹಿತಿ ನೀಡಲಾಗುತ್ತಿದೆ. ಪ್ರಸ್ತುತ ವಜ್ರಾಭರಣಗಳು ಫ್ಯಾಷನ್ನ ಪ್ರಮುಖ ಭಾಗವಾಗಿದ್ದು, ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ವೈವಿಧ್ಯಮಯ ಸಂಗ್ರಹ ಮುಳಿಯದಲ್ಲಿ ಲಭ್ಯವಿದೆ ಎಂದರು.


ಉಜಿರೆ ಎಸ್ಡಿಎಂ ಪಿಯುಸಿ ಬಾಲಕಿಯರ ವಸತಿ ನಿಲಯದ ಮುಖ್ಯ ವಾರ್ಡನ್ ಕೃತಜ್ಞಾ ಜೈನ್ ಮಾತನಾಡಿ, ಮುಳಿಯ ಸಂಸ್ಥೆಯ ಮೇಲಿನ ನಂಬಿಕೆಯಿಂದ ತಾನು ಈ ಮಳಿಗೆಯನ್ನೇ ಅವಲಂಬಿಸಿದ್ದೇನೆ. ವಜ್ರದ ಸೌಂದರ್ಯದ ಜೊತೆಗೆ ಅದನ್ನು ಏಕೆ ಖರೀದಿಸಬೇಕು, ಅದರ ವೈಶಿಷ್ಟ್ಯವೇನು ಎಂಬುದರ ಬಗ್ಗೆಯೂ ಇಲ್ಲಿ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು.
ಎಸ್ಡಿಎಂ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಕೆ. ರತ್ನಾವತಿ ಮಾತನಾಡಿ, ವಜ್ರಾಭರಣಗಳಲ್ಲಿ ಹಲವು ವೈವಿಧ್ಯಗಳಿದ್ದು, ಅವುಗಳ ಕುರಿತು ಗ್ರಾಹಕರಿಗೆ ಅರಿವು ಮೂಡಿಸಲು ಇಂತಹ ಮೇಳಗಳು ಅಗತ್ಯ. ಒಡವೆಗಳು ಸಂಪ್ರದಾಯದೊಂದಿಗೆ ಸಂತೋಷದ ಭಾಗವಾಗಿವೆ. ಪಾರದರ್ಶಕ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಮುಳಿಯ ಸಂಸ್ಥೆ ಜನರ ಮನಮನೆ ತಲುಪಿದೆ. ಹೊಸ ಪರಿಕಲ್ಪನೆಗಳೊಂದಿಗೆ ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಗೆ ತಕ್ಕಂತೆ ಸಂಸ್ಥೆ ಬೆಳೆಯುತ್ತಿದೆ ಎಂದರು.
95% ವರೆಗೆ ರಿಯಾಯಿತಿ‘Diamond for Everyone’ ಎಂಬ ಪರಿಕಲ್ಪನೆಯೊಂದಿಗೆ ನಡೆಯುತ್ತಿರುವ ಮೇಳದಲ್ಲಿ ವಿವಿಧ ವಯೋಮಾನದ ಹಾಗೂ ವಿವಿಧ ವರ್ಗದ ಗ್ರಾಹಕರಿಗೆ ಹೊಂದುವ ವಜ್ರಾಭರಣಗಳನ್ನು ಪರಿಚಯಿಸಲಾಗಿದೆ. Amulya Diamonds, KISNA Diamond & Gold Jewellery ಸೇರಿದಂತೆ ವಿವಿಧ ವಿನ್ಯಾಸಗಳ ವಜ್ರಾಭರಣಗಳು ಲಭ್ಯವಿವೆ.ಮೇಳದ ವಿಶೇಷ ಕೊಡುಗೆಯಾಗಿ ವಜ್ರಾಭರಣಗಳ ಮೇಲೆ ಗರಿಷ್ಠ 95% ವರೆಗೆ ಹಾಗೂ ಬೈಬ್ಯಾಕ್ನಲ್ಲಿ 90% ವರೆಗೆ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಹಳೆಯ ವಜ್ರಾಭರಣಗಳನ್ನು ಬದಲಾಯಿಸಿ ಹೊಸ ವಿನ್ಯಾಸದ ಆಭರಣಗಳನ್ನು ಪಡೆಯಲು ಕೂಡ ಅವಕಾಶವಿದೆ.ಮುಳಿಯ ಜ್ಯುವೆಲ್ಸ್ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಹಾಗೂ ಬೆಂಗಳೂರಿನ ಮಳಿಗೆಗಳಲ್ಲೂ ‘Diamond Fest’ ವಿಶೇಷ ಪ್ರಯೋಜನಗಳು ಲಭ್ಯವಿರಲಿವೆ.ಕಾರ್ಯಕ್ರಮದಲ್ಲಿ ಸಿಲ್ವರ್ ಮ್ಯಾರಥಾನ್ ಲಕ್ಕಿ ಡ್ರಾ ಕೂಪನ್ ಆಯ್ಕೆ ನಡೆಯಿತು. ಸೌಜನ್ಯ, ಮಧುಶ್ರೀ ಹಾಗೂ ಮಿಥುನ್ ವಿ. ಶೆಟ್ಟಿ ವಿಜೇತರಾದರು.ಮುಳಿಯ ಸಂಸ್ಥೆಯ ಇ.ಎ. ಶಿವಕೃಷ್ಣ ಭಟ್ ಉಪಸ್ಥಿತರಿದ್ದರು. ಮುಳಿಯ ಸಿಬ್ಬಂದಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಅಸಿಸ್ಟೆಂಟ್ ಮ್ಯಾನೇಜರ್ ಸುಧೀರ್ ಧನ್ಯವಾದ ಸಲ್ಲಿಸಿದರು. ಶ್ರಾವ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು.









