






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪೊಸೊಳಿಕೆಯಲ್ಲಿ ರಬ್ಬರ್ ಒಣಗಿಸುವ ಸ್ಟೋಕ್ ಹೌಸ್ ಕಟ್ಟಡಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.



ಇಲ್ಲಿನ ನಿವಾಸಿ ಪಿ.ಕೆ. ಜೋಬ್ ಅವರಿಗೆ ಸೇರಿದ ಸ್ಮೋಕ್ ಹೌಸ್ ಬೆಂಕಿಗೆ ಆಹುತಿಯಾಗಿದೆ. ಮನೆಯ ಸಮೀಪವೇ ಇದ್ದ ಎರಡು ಸ್ಮೋಕ್ ಹೌಸ್‌ಗಳು ಆಕಸ್ಮಿಕ ಬೆಂಕಿಯಲ್ಲಿ ಸಂಪೂರ್ಣ ಹಾನಿಗೀಡಾಗಿವೆ. ಒಣಗಲು ಹಾಕಿದ್ದ ರಬ್ಬರ್ ಶೀಟ್‌ಗಳು ಹಾಗೂ ಕಟ್ಟಡದೊಳಗಿದ್ದ ಮರದ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿವೆ.
ಸುಮಾರು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.ಸೆ.2ರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಕಟ್ಟಡಗಳು ಪೂರ್ಣ ಪ್ರಮಾಣದಲ್ಲಿ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.









