ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಸ್ಪಂದನಾರಿಗೆ ಸಂಭ್ರಮದ ವಿದಾಯ

0

ಬೆಳ್ತಂಗಡಿ: ಆ. 29ರಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆ ಬೆಳ್ತಂಗಡಿಯಲ್ಲಿ ಸುಮಾರು 1 ತಿಂಗಳು ಸ್ಪಂದನಾ ಎಮ್.ಎಸ್. ಎಂಬವರು ತನ್ನ ವಿದ್ಯಾರ್ಥಿ ಜೀವನದಲ್ಲಿ ಒಬ್ಬ ಅತ್ಯುತ್ತಮ ಸುಶ್ರೂಕಿ ಆಗಬೇಕೆಂದು ಬಯಸಿ ಈಗಾಗಲೇ ಸರಕಾರಿ ಮೀಸಲಾತಿ ಅಡಿಯಲ್ಲಿ ಮಂಗಳೂರಿನ ಖ್ಯಾತ ಆಸ್ಪತ್ರೆ ಅಥೆನಾದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಸ್ಪಂದನಾ ಎಮ್.ಎಸ್. ರಜೆಯಲ್ಲಿ ತರಬೇತಿಗಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯ ಆಡಳಿತ ವಿಭಾಗದಲ್ಲಿ ಅತ್ಯುತ್ತಮವಾಗಿ ತನ್ನ ಕಾರ್ಯ ವೈಖರಿಯನ್ನು ತೋರಿಸಿ ಸಂಸ್ಥೆಯ ಎಲ್ಲಾ ನೌಕರರಿಗೆ ಮಾದರಿಯಾಗಿರುತ್ತಾರೆ. ಹಾಗೂ ನಿರೀಕ್ಷೆಗೂ ಮೀರಿ ತನ್ನ ಖ್ಯಾತಿಯನ್ನು ತೋರ್ಪಡಿಸಿ ಸಂಸ್ಥೆಯಿಂದ ವಿಶಿಷ್ಟವಾದ ಸನ್ಮಾನ ಪಡೆದು, ವಿದಾಯ ಪಡೆದು ಧನ್ಯವಾದ ನೀಡಿ ಸಂಸ್ಥೆಯಿಂದ ತೆರಳಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋರವರು ಸ್ಪಂದನಾರವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಸಂಸ್ಥೆಯ ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜರವರು ಸ್ವಾಗತಿಸಿ, ಸುಮಲತಾರವರು ವಂದಿಸಿದರು. ಎಲ್ಲಾ ಸಿಬ್ಬಂದಿಗಳು ಸೇರಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here