ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ಮೈಸೂರಿನ ಪಶು ವೈದ್ಯ ಇಲಾಖೆಯ ಸೂಪರಿಂಟೆಂಡೆಂಟ್ ಜೆಸಿಂತಾ ಮೋರಸ್ ಸೇರಿದಂತೆ ಪ್ರಮುಖರ ಭೇಟಿ

0

ಬೆಳ್ತಂಗಡಿ: ಆ. 27ರಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಪಶು ವೈದ್ಯ ಇಲಾಖೆ ಮೈಸೂರಿನ ಸೂಪರಿಟೆಂಡೆಂಟ್ ಜೆಸಿಂತಾ ಮೋರಸ್ ಹಾಗೂ ಕೃಷಿ ಇಲಾಖೆ ಮೈಸೂರಿನ ಸೂಪರಿಟೆಂಡೆಂಟಾದ ರೊನಾಲ್ಡ್ ಮತ್ತು ನಿಕಟ ಪೂರ್ವ ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಮತ್ತು ಖ್ಯಾತ ನ್ಯಾಯವಾದಿಯಾದ ವ್ಯಾಲಂಟೈನ್ ಡಿ’ಸಿಲ್ವಾ ಹಾಗೂ ಅವರ ಪತ್ನಿ ಸಂತ ಅಲೋಷಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಪ್ರೆಸಿಲ್ಲಾ ಮೋರಸ್ ರವರು ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ವಿಚಾರಗಳನ್ನು ತಿಳಿದು ಹರ್ಷಗೊಂಡರು.

ಕಷ್ಟ ಪಟ್ಟು ದುಡಿದರೆ ಇಷ್ಟಪಟ್ಟು ಕೆಲಸ ಮಾಡಿದರೆ ವೈಯಕ್ತಿಕ ನಷ್ಟವಾಗದು. ನಗುಮುಖದ ಸೇವೆ, ಪ್ರಾಮಾಣಿಕತೆ, ಸತ್ಯದ ಮಾತು, ಸಂಸ್ಥೆಯ ಬೆಳವಣಿಗೆಯ ಗುಟ್ಟು. ಸೋಜಾ ಸಂಸ್ಥೆಯು 31 ವರ್ಷಗಳ ಕಾಲ ಈ ಊರಿನಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಇದಕ್ಕೆಲ್ಲಾ ಕಾರಣ ನಂಬಿಕಸ್ಥ ಗ್ರಾಹಕರೆಂದು ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಶುಭವಾಗಲಿ ಎಂದು ಹಾರೈಸಿ ಅಭಿನಂದಿಸಿದರು.
ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋರವರು ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಸಿಬ್ಬಂದಿಗಳಾದ ಅಕ್ಷತಾರವರು ಸ್ವಾಗತಿಸಿ, ಮೋಹಿನಿಯವರು ವಂದಿಸಿದರು.

LEAVE A REPLY

Please enter your comment!
Please enter your name here