






ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆಯನ್ನು ಆ. 29ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ರೆವ. ಫಾ. ಎಲಿಯಾಸ್ ಡಿ’ಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ನೂರುಲ್ ಇಸ್ಲಾಂ ಜುಮಾ ಮಸೀದಿಯ ಖತೀಬರು ಹಾಗೂ ಧರ್ಮಗುರು ಮುಹಮ್ಮದ್ ಮುಸ್ತಫಾ ಹಿಮಾಮಿ ಅಲ್-ಫುರ್ಕಾನಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೋಳಿ ಇಲ್ಲಿಕ್ಕ್ಯಲ್ ಉಪಸ್ಥಿತರಿದ್ದರು.


ಮುಖ್ಯ ಅತಿಥಿಗಳು ಈದ್ ಮಿಲಾದ್ ಆಚರಣೆಯ ಮಹತ್ವವನ್ನು ವಿವರಿಸುತ್ತಾ, ಪ್ರತಿಯೊಬ್ಬರನ್ನು ಸಹೋದರ-ಸಹೋದರಿಯರಂತೆ ಕಾಣಬೇಕು. ಧರ್ಮದ ಆಧಾರದ ಮೇಲೆ ಯಾರನ್ನೂ ಕೀಳಾಗಿ ಕಾಣದೆ, ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು ಎಂದು ತಿಳಿಸಿದರು. ಫಾ. ಎಲಿಯಾಸ್ ಡಿ’ಸೋಜಾ ಅವರು ಮಾತನಾಡಿ, ಎಲ್ಲರನ್ನೂ ಸಮಾನವಾಗಿ ಕಾಣುವುದರ ಜೊತೆಗೆ ಪರಸ್ಪರ ಗೌರವದಿಂದ ಬದುಕಬೇಕು ಎಂಬ ಸಂದೇಶ ನೀಡಿದರು.
5ನೇ ತರಗತಿಯ ನುಹಾ ಫಾತಿಮಾ ಸ್ವಾಗತಿಸಿದರು. ನಿರೂಪಣೆಯನ್ನು 8ನೇ ತರಗತಿಯ ಆಯಿಷಾ ಸಹ್ಲಾ ನೆರವೇರಿಸಿದರು. ಹಾಗೂ 7ನೇ ತರಗತಿಯ ಫಾತಿಮಾ ಹಸ್ನಾ ವಂದನಾರ್ಪಣೆ ಸಲ್ಲಿಸಿದರು.









