ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ

0

ಬೆಳ್ತಂಗಡಿ: ಸಂವಿಧಾನ ಸಂರಕ್ಷಣಾ ಸಮಿತಿ ಇದರ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ಆ.30ರಂದು ಸಮಿತಿಯ ಅಧ್ಯಕ್ಷ ಸುಂದರ್ ಕಾಶಿಪಟ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಉದ್ದೇಶ ಹಾಗೂ ಮೀಸಲಾತಿ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ಶಿಕ್ಷಕ ಸುಕೇಶ್ ಕೆ ಮಾಲಾಡಿ ಹೇಳಿದರು. ಯುವ ಮುಖಂಡರುಗಳು ಅಭಿಪ್ರಾಯ, ಪ್ರಶ್ನೆ, ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಸಂವಿಧಾನ ರಕ್ಷಣಾ ಸಮಿತಿಯ ಗೌರವ ಸಲಹೆಗಾರರಾಗಿರುವ ಶೇಖರ್ ಕುಕ್ಕೇಡಿ ಅವರು ಸಂವಾದದೊಂದಿಗೆ ಉತ್ತರಿಸಿದರು.

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಶಿವಾನಂದ ಪಡಂಗಡಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಜಿರೆ, ಗೌರವ ಸಲಹೆಗಾರರಾದ ಓಬಯ್ಯ ಆರಂಬೋಡಿ, ಶೇಖರ್ ವಿ ಧರ್ಮಸ್ಥಳ, ಬಾಬಿ ಮಾಲಾಡಿ, ನಾರಾಯಣ ಪುದುವೆಟ್ಟು, ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ದಿನೇಶ್ ಕೊಕ್ಕಡ, ಯುವವಕೀಲೆ ಸವಿತಾ ಇವರುಗಳು ಅನಿಸಿಕೆ ವ್ಯಕ್ತಪಡಿಸಿದರು. ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ‌

ಸುಶ್ಮೀತಾ ಮಾಲಾಡಿ ಸ್ವಾಗತಿಸಿ, ವಿನಯ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಮಾನ್ಯ ಉಜಿರೆ ವಂದಿಸಿದರು.

LEAVE A REPLY

Please enter your comment!
Please enter your name here