ದೇವಾಂಗ ಸಮಾಜ ಮುಂಡಾಜೆ ಘಟಕದ 34ನೇ ಘಟಕ ಸಭೆ

0

ಬೆಳ್ತಂಗಡಿ : ದೇವಾಂಗ ಸಮಾಜ ಮುಂಡಾಜೆ ಘಟಕ ಇದರ 34ನೇ ಘಟಕ ಸಭೆಯು ಶಶಿಧರ ನೇಕಾರ ಬನಶಂಕರಿ ಇವರ ಮನೆಯಲ್ಲಿ ನಡೆಯಿತು. ಶ್ರಾವ್ಯ ಮತ್ತು ಮಾಸ್ಟರ್ ಶ್ರವಣ್ ಇವರು ಪ್ರಾರ್ಥಿಸಿದರು. ಸಭೆಯನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಶಿಧರ ನೇಕಾರ ವಹಿಸಿದ್ದು, ವೇದಿಕೆಯಲ್ಲಿ ಮಾಜಿ ಅಧ್ಯಕ್ಷರು, ಮಾಜಿ ವಲಯ ಸ್ಥಾಪಕಧ್ಯಕ್ಷರು, ವಲಯಾಧ್ಯಕ್ಷರು ಹಾಗು ಘಟಕದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ಷಿತಾ ಶಶಿಧರ್ ಸ್ವಾಗತವನ್ನು ಕೋರಿ, ಕೇಶವ ದೇವಾಂಗರವರು ರಕ್ಷಾಬಂಧನದ ಮಹತ್ವವನ್ನು ಪೌರಾಣಿಕ ಕಥೆಯ ಮೂಲಕ ವಿವರಿಸಿ ತ್ಯಾಗ,ಪ್ರೀತಿ,ರಕ್ಷಣೆಯ ಸಹೋದರತ್ವದ ಅಭಯವನ್ನು ತಿಳಿಸಿದರು. ಮತ್ತು ಸಾಂಕೇತಿಕವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿ ಸಹೋದರತ್ವವನ್ನು ಸಾರಲಾಯಿತು. ಸವಿತಾ ಕೇಶವ ದೇವಾಂಗರವರು ಹಿಂದಿನ ಸಭೆಯ ವರದಿ ವಾಚಿಸಿ ಅನುಮೋದಿಸಲಾಯಿತು.

ಕಾರ್ಯದರ್ಶಿ ಸಚಿನ್ ಎಂ ಎಸ್ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆ.16 ರಂದು ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಹಾಗು ಪದಗ್ರಹಣ ಸಮಾರಂಭ ಕಾರ್ಯಕ್ರಮದ ವರದಿ ವಾಚಿಸಿ, ಖರ್ಚು ವೆಚ್ಚಗಳ ವಿವರವನ್ನು ಸಭೆಯಲ್ಲಿ ತಿಳಿಸಿ, ಮಿಗತೆಯ ಬಜೆಟ್ ಘೋಷಿಸಿ, ಸಹಕರಿಸಿದ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ನಂತರ ಈ ಕಾರ್ಯಕ್ರಮದ ಬಗ್ಗೆ ಶ್ರೀ ಭಾಸ್ಕರ ಎಂ ಡಿ , ರವಿಚಂದ್ರ ನೆಯ್ಯಾಲು,ಕೇಶವ ದೇವಾಂಗ , ಸಂಜೀವ ಎಂ ಡಿ , ಸವಿತಾ ಕೆ ದೇವಾಂಗ, ರೋಹಿತ್ ಕಾಶಿಬೆಟ್ಟು ರವರು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಕಾರ್ಯಕ್ರಮದ ಯಶಸ್ಸನ್ನು ಹಂಚಿಕೊಂಡು ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕೆಂದು ಎಲ್ಲರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸಿದರು.

ಮುಂಗಡ ಪಾವತಿಗೆ ಇನ್ನು ಮುಂದೆ ಹೊಸ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಘಟಕಾಧ್ಯಕ್ಷರು ಮಾತನಾಡಿ ಕಾರ್ಯಕ್ರಮವು ಯಶಸ್ವಿಯಾಗಲು ಎಲ್ಲರೂ ಜವಾಬ್ದಾರಿಯಿಂದ ನಡೆಯಬೇಕು, ಇಂತಹ ಮಾದರಿ ಕಾರ್ಯಕ್ರಮವನ್ನು ಇನ್ನು ಮುಂದೆಯೂ ನಾವೆಲ್ಲ ಸೇರಿ ಯಶಸ್ವಿಯಾಗಿ ಮಾಡೋಣವೆಂದು ಹಾರೈಸಿ, ಘಟಕದ ಸದಸ್ಯರಿಗೆ ಅಭಿನಂದಿಸಿ, ತಮ್ಮ ಕೊಡುಗೆಯಾಗಿ ಸದಸ್ಯರ ಮನೆಯ ಕಾರ್ಯಕ್ರಮದ ಉಪಯೋಗಕ್ಕೆಂದು 50 ಊಟದ ಸ್ಟೀಲ್ ತಟ್ಟೆಯನ್ನು ಉಚಿತವಾಗಿ ನೀಡಿದರು.

ಘಟಕದ ನಿಧಿ ಸಮರ್ಪಣಾ ಕಾರ್ಯಕ್ಕೆ ನಿಧಿ ಸಮರ್ಪಿಸಿದ ರಾಜು ತಮಿಳುನಾಡು ಇವರನ್ನು ಸನ್ಮಾನಿಸಿ ಫಲಕವಿತ್ತು ಅಭಿನಂದಿಸಲಾಯಿತು. ಇಂದಿನ ಸಭೆಯಲ್ಲಿ 3 ಸದಸ್ಯರಿಗೆ ಮುಂಗಡ ಪಾವತಿಯನ್ನು ವಿತರಿಸಲಾಯಿತು. ಮುಂದಿನ ಸಭೆಯನ್ನು ವಸಂತಿ ರಾಜಗೋಪಾಲ್ ರವರ ಮನೆಯಲ್ಲಿ ನಡೆಸುವುದೆಂದು ನಿರ್ಧರಿಸಿ ಸಭಾ ವೀಳ್ಯ ನೀಡಲಾಯಿತು. ಸಚಿನ್ ಎಂ ಎಸ್ ನಿರೂಪಿಸಿ, ರೋಹಿತ್ ಕಾಶಿಬೆಟ್ಟುರವರ ಧನ್ಯವಾದದೊಂದಿಗೆ ಸಭೆಯು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here