







ಬೈಂದೂರು ತಾಲೂಕು ಬಿಲ್ಲವರ ಸಂಘದ ಇವರ ಆಶ್ರಯದಲ್ಲಿ ಗೋಳಿಹೊಳೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತಚಾರಣೆಯಲ್ಲಿರುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆ. 30ರಂದು ಬ್ರಹ್ಮಶ್ರೀ ನಾರಾಯಣಗುರುಗಳ172ನೇ ಜನ್ಮದಿನ ಆಚರಿಸಲಾಯಿತು.



ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬೈಂದೂರು ಗಾಂಧಿ ಮೈದಾನದಿಂದ ಹೊರಟು ಬೈಂದೂರು ಪೇಟೆ ಮುಖಾಂತರ ಯಡ್ತರೆ ಮಾರುಕಟ್ಟೆಯಿಂದ ಕೊಲ್ಲೂರು ಮಾರ್ಗದಲ್ಲಿ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದ ವರೆಗೆ ಗುರು ಸಂದೇಶ್ ಜಾಥಾ ನಡೆಯಿತು.
ಬಳಿಕ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ “ನಾರಾಯಣಗುರು ಜಯಂತಿ” ಶ್ರೀ ಗಳಿಂದ ಆಶೀರ್ವಚನ ನಡೆಯಿತು.ಬೈಂದೂರು ತಾಲೂಕು ಬಿಲ್ಲವರ ಸಂಘ,ಬಿಲ್ಲವ ಯುವ ಘಟಕ ಬೈಂದೂರು ಹಾಗೂ ಬಿಲ್ಲವ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









