







ಮಡಂತ್ಯಾರು : ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ. 30ರಂದು ಸೇಕ್ರೆಡ್ ಹಾರ್ಟ್ ಸಭಾ ಭವನ ದಲ್ಲಿ ಸಂಘದ ಅಧ್ಯಕ್ಷ ಜೋಯಲ್ ಮೆಂಡೋನ್ಸ ಅದ್ಯಕ್ಷತೆಯಲ್ಲಿ ಜರಗಿತು.
2025-26ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ ಅತ್ಯುತ್ತಮ ಲಾಭಗಳಿಸಿದೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ‘ಎ’ ವರ್ಗಕ್ಕೆ ಸೇರಿಸಲಾಗಿದೆ. 2025-26ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ‘ಎ’ ವರ್ಗದಲ್ಲಿ 5605, ‘ಸಿ’ ವರ್ಗದಲ್ಲಿ 7775 ಮತ್ತು ‘ಡಿ’ ವರ್ಗದಲ್ಲಿ 270 ಒಟ್ಟು 13650 ಸದಸ್ಯರನ್ನು ಹೊಂದಿದ್ದು, ರೂ 144.58ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಆರ್ಥಿಕ ವರ್ಷದಲ್ಲಿ ರೂ.577.80 ಕೋಟಿ ವ್ಯವಹಾರ ನಡೆಸಿ ವರ್ಷ್ಷ್ಯಂತ್ಯಕ್ಕೆ ಶೇ.97.55 ಸಾಲ ವಸೂಲಾತಿಯನ್ನು ಮಾಡಿ ರೂ. 2,03,22,936.70 ಲಾಭಗಳಿಸಿದೆ.
ಸಹಕಾರಿಗಳು ಕೂಲಿ ಕಾರ್ಮಿಕರು ಆಗಿರುವುದರಿಂದ ಒಂದು ದಿನ ಕೆಲಸಕ್ಕೆ ರಜಾ ಮಾಡಬೇಕಾಗಿರುವುದರಿಂದ ಪಡಿತರ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ನೀಡಲು ಸಂಘದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಅದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದನ್ನು ವಿತರಿಸಿದ ತಾಲೂಕಿನ ಪ್ರಥಮ ಸಹಕಾರಿ ಮಾದರಿ ಸಹಕಾರಿ ಎನಿಸಿಕೊಂಡಿದೆ. ಸಂಘದ ಸದಸ್ಯರ ಸಹಾಯ ನಿಧಿಯಿಂದ ರೂ. 4.50ಲಕ್ಷ ಆರ್ಥಿಕ ನೆರವು ವಿತರಿಸಲಾಗಿದೆ.


ಸಂಘದ ಸಭಾ ಭವನ ಬಾಡಿಗೆಗೆ ನೀಡಲಾಗುವುದು. ಸಂಘದಿಂದ ಉಚಿತ ಯೋಗ ತರಬೇತಿ ನೀಡಲಾಗುತ್ತದೆ. ಸಂಘಕ್ಕೆ ಒಳಪಟ್ಟ ಕಚ್ಚ ರಸ್ತೆಗಳನ್ನು ನಿರ್ವಹಣೆ ಮಾಡಲಾಗಿದ್ದು ಇದು ಗ್ರಾಮ ಪಂಚಾಯತ್ ಮಾಡುವ ಕೆಲಸ ಒಂದು ಸಹಕಾರಿ ನಡುತ್ತಿರುವುದು ರಾಜ್ಯ ದಲ್ಲಿ, ದೇಶದಲ್ಲಿ ಪ್ರಥಮ ಎಂದೇನಿಸಿಕೊಂಡಿದೆ. ಈ ಸಾಧನೆಗೆ ಬೆನ್ನೆಲುಬಾಗಿರುವ ಸಂಘದ ಸದಸ್ಯರು, ಪ್ರಾಮಾಣಿಕ ಸಿಬ್ಬಂದಿಗಳು, ಅತ್ಯುತ್ತಮ ಆಡಳಿತ ಮಂಡಳಿ ಮತ್ತು ಹಿತೈಷಿಗಳ ಆಶೀರ್ವಾದಗಳಿಂದ ಈ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು.
ಈ ಸಾಧನೆಯಲ್ಲಿ ದೊರೆತ ಯಶಸ್ಸನ್ನು ಸಂಘದ ಎಲ್ಲಾ ಸದಸ್ಯರುಗಳಿಗೆ ಅರ್ಪಿಸುತ್ತೇನೆ ಎಂದರು.2025-26 ಸಾಲಿನ ದ್ವಿತೀಯ ಪಿಯುಸಿ | ತತ್ಸಮಾನ ತಾಂತ್ರಿಕ ಅಂತಿಮ ಪದವಿ ಪರೀಕ್ಷೆಯಲ್ಲಿ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಾಧಕ ಕೃಷಿಕರಿಗೆ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಕಾಂತಪ್ಪ ಗೌಡ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ, ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾದ ಧನಲಕ್ಷ್ಮೀ, ಅಮಿತಾ ಪ್ರಿಯಾ ಲೋಬೋ, , ಸುರೇಶ್ ಎಸ್,ಶಶಿಪ್ರಭಾ, ಮಹಾಬಲ,ಗಣೇಶ್ ಮೂಲ್ಯ, ಗೋಲಕೃಷ್ಣ ಕೆ. ಕಿಶೋರ್ ಕುಮಾರ್ ಶೆಟ್ಟಿ, ಬಿ. ಪದ್ಮನಾಭ ಸಾಲಿಯಾನ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ ವರದಿ ಮಂಡಿಸಿದರು.









