






ಬೆಳ್ತಂಗಡಿ: ಜಮೀನು ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಒಂದು ಕೋಟಿ ರೂ ಪಡೆದು ವಂಚಿಸಿರುವ ಆರೋಪದಡಿ ಮಂಗಳೂರಿನ ಕೊಟ್ಟಾರ ಚೌಕಿಯ ಶಶಿಧರ ಅಚ್ಯುತ ತೋಟಂತಿಲ ಎಂಬವರು ನೀಡಿದ ದೂರಿನಂತೆ ಕುವೆಟ್ಟು ಗ್ರಾಮದ ಸಸ್ಯೋದ್ಯಾನ ನಿವಾಸಿಗಳಾದ ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ತಮ್ಮ ಮೇಲಿನ ಆರೋಪವನ್ನು ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ನಿರಾಕರಿಸಿದ್ದಾರೆ.
ಪ್ರಕರಣ ದಾಖಲು: ಮಂಗಳೂರಿನ ಕೊಟ್ಟಾರಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂತಿಲ (೬೧) ಅವರು ನೀಡಿದ ದೂರಿನಂತೆ ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೯೧/೨೦೨೬ರಂತೆ ಬಿಎನ್ಎಸ್ ೩೧೮(೪) ಹಾಗೂ ೩(೫)ರಡಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಾಂಕ ೦೪-೧೦-೨೦೨೫ರಂದು ರಂಜನ್ ರಾವ್ ಎರ್ಡೂರು ಎಂಬವರ ಮಾಲಕತ್ವದ ಸರ್ವೆ ನಂ. ೮೫/೩ಎ೧ ಜಮೀನಿಗೆ ಸಂಬಂಧಪಟ್ಟಂತೆ ೦.೨೮.೫೦ ಎಕ್ರೆ ಜಮೀನನ್ನು ಸೋಮನಾಥ್ ನಾಯಕ್ ಎಂಬವರ ಮುಂದಾಳತ್ವದಲ್ಲಿ ರಂಜನ್ ರಾವ್ ಎರ್ಡೂರುರವರಿಗೂ ಹಾಗೂ ಶಶಿಧರ್ ಅಚ್ಯುತ ತೋಟಂತಿಲ ಅವರಿಗೂ ಕರಾರು ಆಗಿದೆ. ಈ ಜಮೀನಿನೊಟ್ಟಿಗೆ ೦.೭೦.೨೫ ಎಕ್ರೆ ಜಮೀನು ಲಗತ್ತು ಇದು ಸದ್ಯಕ್ಕೆ ಕುಮ್ಕಿ ಎಂದು ಕಾಣಿಸುತ್ತೇವೆ. ಮುಂದಕ್ಕೆ ಈ ಜಮೀನನ್ನು ರಂಜನ್ ರಾವ್ ಎರ್ಡೂರುರವರ ಮುಖೇನ ಅವರ ವರ್ಗ ಜಮೀನಿನೊಟ್ಟಿಗೆ ಸೇರಿಸಿ ತಂತಿ ಬೇಲಿ ಹಾಕಿಸಿ ಆಪಾದಿತರ ಸ್ವಾಧೀನದಲ್ಲಿದ್ದು ಮುಂದಕ್ಕೆ ಸದ್ರಿ ೦.೭೦.೨೫ ಎಕ್ರೆ ಜಮೀನು ಕುಮ್ಕಿ ಆಗಿದ್ದು ಮುಂದಕ್ಕೆ ಪ್ರಭಾವವನ್ನು ಬಳಿಸಿ ದರ್ಖಾಸ್ತು ಮಾಡಿಸಿಕೊಂಡು ನಿಮಗೆ ಒಟ್ಟು ೦.೨೮.೫೦ ಹಾಗೂ ೦.೭೦.೨೫ ಒಟ್ಟು ೦.೯೮.೭೫ ಎಕ್ರೆ ಜಮೀನನ್ನು ರಿಜಿಸ್ಟರ್ ದಾಖಲು ಮುಖೇನ ಕ್ರಯವರಿಸಿ ನಿಮ್ಮ ಸ್ವಾಧೀನಕ್ಕೆ ಕೊಡುತ್ತೇವೆ ಎಂದು ಹೇಳಿ ಆಪಾದಿತರು ಒಟ್ಟು ೯೦,೦೦,೦೦೦ ರೂಪಾಯಿಗೆ ಕರಾರು ಮಾಡಿಕೊಂಡಿದ್ದಾರೆ.
ಅದರಂತೆ ಆಪಾದಿತ ರಂಜನ್ ರಾವ್ ಎರ್ಡೂರುರವರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆಗೆ ೦೧೮೩೨೨೦೦೦೩೭೩೬೬ನೇದಕ್ಕೆ ೨೪, ೦೦,೦೦೦ ಲಕ್ಷ ಹಾಗೂ ಆಪಾದಿತ ಸೋಮನಾಥ ನಾಯಕ್ರವರ ಕೆನರಾ ಖಾತೆ ಸಂಖ್ಯೆಯಾದ ೬೪೨೩೧೦೧೦೦೧೫೬೩ನೇದಕ್ಕೆ ೧೨,೬೧೨೫೦ ರೂ ಹಾಗೂ ಆಪಾದಿತ ಸೋಮನಾಥ ನಾಯಕ್ರವರ ಪತ್ನಿ ಕೆ. ವಿದ್ಯಾ ನಾಯಕ್ರವರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ೦೧೮೩೨೨೦೦೦೩೨೩೯೦ನೇದಕ್ಕೆ ಒಟ್ಟು ೧೯ ಲಕ್ಷ ರೂಪಾಯಿಗಳು ಹಾಗೂ ಆರೋಪಿಯ ಸಹಾಯಕರಾದ ದಯಾನಂದ ಪೂಜಾರಿ ಅವರ ಖಾತೆ ಸಂಖ್ಯೆಯಾದ ೦೧೮೩೨೨೦೦೦೨೪೫೬೦ನೇದಕ್ಕೆ ೧೬ ಲಕ್ಷ ಹಾಗೂ ಮತ್ತೊಬ್ಬ ಬಾಬು ಎ. ರವರ ಖಾತೆ ಸಂಖ್ಯೆಯಾದ ೦೧೮೩೨೨೦೦೦೩೭೭೮೦ನೇದಕ್ಕೆ ೮ ಲಕ್ಷ ಹಾಗೂ ಸಂದೀಪ್ರವರ ಖಾತೆಗೆ ೧೧ ಲಕ್ಷ ಹಾಗೂ ಭಾರತಿರವರ ಖಾತೆ ಸಂಖ್ಯೆ ೦೧೮೩೨೨೦೦೦೫೦೨೨೪ನೇದಕ್ಕೆ ೬ ಲಕ್ಷ ಹಾಗೂ ಸೋಮಶೇಖರ್ರವರ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆಯಾದ ೫೨೦೧೦೧೦೦೨೦೭೪೨೭೧ನೇದಕ್ಕೆ ೪೦ ಲಕ್ಷ ಹೀಗೆ ಒಟ್ಟು ೧,೦೦,೬೧,೨೫೦ ರೂಪಾಯಿ ಹಣವನ್ನು ಪಿರ್ಯಾದಿದಾರರಿಂದ ೯೦ ಲಕ್ಷಕ್ಕೆ ಕರಾರು ಆಗಿದ್ದರೂ ಸಹ ದರ್ಖಾಸು ಮಾಡಿಸಿಕೊಡುವುದಾಗಿ ೧,೦೦,೬೧,೨೫೦ ರೂ ಹಣವನ್ನು ವಿವಿಧ ಖಾತೆಗೆ ಹಾಕಿಸಿ ಈ ಬಗ್ಗೆ ಪಿರ್ಯಾದಿದಾರರು ಇದು ಕುಮ್ಕಿ ಭೂಮಿಯಲ್ಲ ದರ್ಖಾಸು ಮಾಡಿಸುವುದು ಕಷ್ಟಸಾಧ್ಯವೆಂದು ಸೋಮನಾಥ ನಾಯಕ್ ಅವರಿಗೆ ತಿಳಿಸಿದರೂ ಆ ವಿಷಯ ನಿಮಗೆ ಬೇಡ ಎಂದು ತಿಳಿಸಿ ಪಿರ್ಯಾದಿದಾರರಿಗೆ ಆಪಾದಿತರು ಮೇಲ್ಕಾಣಿಸಿದ ಜಾಗವು ಕುಮ್ಕಿ ಜಮೀನು ಎಂದು ಹೇಳಿ ಸರಕಾರಿ ಜಮೀನನ್ನು ಅಕ್ರಮಿಸಿರುವ ಕುರಿತು ಸೋಮನಾಥ ನಾಯಕ್ರವರ ವಿರುದ್ಧ ಕರ್ನಾಟಕ ಭೂಕಬಳಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು ಇದರಿಂದ ಬಚವಾಗಲು ದಿನಾಂಕ ೧೪-೪೨೦೨೬ರಂದು ೨೮ ಸೆಂಟ್ಸ್ ಕೃಷಿ ಭೂಮಿಯನ್ನು ದಸ್ತಾವೇಜು ನಂಬ್ರ ೬೯೩/೨೦೨೬-೨೭ರಂತೆ ಆಪಾದಿತರು ರಿಜಿಸ್ಟರ್ ಮಾಡಿ ಕೊಟ್ಟಿರುವುದಾಗಿದೆ.


ಈ ರೀತಿಯಾಗಿ ಆಪಾದಿತರು ತನ್ನ ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು ೦.೯೮.೭೫ ಎಕ್ರೆ ಜಾಗವನ್ನು ಕೊಡುವುದಾಗಿ ಪಿರ್ಯಾದಿದಾರರಿಂದ ೯೦ ಲಕ್ಷಕ್ಕೆ ಕರಾರು ಆದರೂ ಕೂಡ ೧,೦೦,೬೧,೨೫೦ ರೂ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂದು ಆ.೧೯ರಂದು ಎಫ್ಐಆರ್ ದಾಖಲಿಸಲಾಗಿದೆ
ಸೋಮನಾಥ ನಾಯಕ್ ಮತ್ತು ರಂಜನ್ ರಾವ್ರಿಂದ ಆರೋಪ ನಿರಾಕರಣೆ: ಭೂಮಿಯ ಮಾಲಕ ರಂಜನ್ ರಾವ್ ಎರ್ಡೂರು ಕರಾರು ಪ್ರಕಾರ ೨೮.೫೦ ಸೆಂಟ್ಸ್ ಭೂಮಿಯನ್ನು ಕುಮ್ಕಿ ಹಕ್ಕು ಸಹಿತ ನೋಂದಣಿ ಮಾಡಿಕೊಟ್ಟಿದ್ದಾರೆ. ಇನ್ನೂ ೧೦.೫೦ ಸೆಂಟ್ಸ್ ನೋಂದಣಿಗೆ ಬಾಕಿ ಇರುತ್ತದೆ.
ಸರ್ವೆಯರ್ಗಳ ದೀರ್ಘ ಮುಷ್ಕರದಿಂದಾಗಿ ನಕ್ಷೆ ಸಿದ್ಧವಾಗದೆ ನೋಂದಣಿ ಸಾಧ್ಯವಾಗಿಲ್ಲ. ನಾವು ಅವರಿಗೆ ವಂಚನೆ ಮಾಡಿಲ್ಲ. ಯಾವುದೇ ವಿಷಯ ಮುಚ್ಚಿಟ್ಟಿಲ್ಲ. ಭೂಕಬಳಿಕೆ ನಿಷೇಧ ಕೋರ್ಟ್ನಲ್ಲಿ ದಾವೆ ಇರುವುದು ನಮಗೆ ತಿಳಿದು ಬಂದದ್ದು ನೋಂದಣಿಯಾದ ಕೆಲ ವಾರ ಬಳಿಕ. ಕುಮ್ಕಿ ಭೂಮಿ ಈ ಕೋರ್ಟ್ನ ವ್ಯಾಪ್ತಿಗೆ ಬರುವುದಿಲ್ಲ. ನಮ್ಮಲ್ಲಿ ಮಾತನಾಡದೆ ಏಕಾಏಕಿ ಪೊಲೀಸ್ ದೂರು ನೀಡಿರುವುದು ತುಂಬಾ ಬೇಸರವುಂಟು ಮಾಡಿದೆ. ಅವರಿಗೆ ನಾವು ಎಲ್ಲಾ ರೀತಿಯ ಸಹಕಾರ ಕೊಟ್ಟಿzವೆ.
ನೋಂದಣಿಯ ಮೊದಲೇ ಭೂಮಿ ಅವರ ಸ್ವಾಧೀನಕ್ಕೆ ಕೊಟ್ಟಿzವೆ. ಅವರು ಸಜ್ಜನರು. ಯಾರದ್ದೋ ಕುಮ್ಮಕ್ಕಿನಿಂದ ದೂರು ನೀಡಿರಬಹುದು ಎಂಬುದು ನಮ್ಮ ಭಾವನೆ. ಅವರಿಗೆ ಭೂಮಿ ಬೇಡವಾದಲ್ಲಿ ತಿಳಿಸಲಿ. ಅವರಿಗೆ ನಷ್ಟವಾಗದಂತೆ ಹಣ ಹಿಂತಿರುಗಿಸಲು ನಾವು ಸಿದ್ಧರಿzವೆ. ನಾವು ಈವರೆಗೆ ನಡೆಸಿದ ಯಾವುದೇ ಭೂ ವ್ಯವಹಾರದಲ್ಲಿ ಯಾರಿಗೂ ವಂಚನೆ ಅಥವಾ ಅನ್ಯಾಯ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಕೆ. ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಸ್ಪಷ್ಟನೆ ನೀಡಿದ್ದಾರೆ.









