






ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಆಗಸ್ಟ್ 27 ರಂದು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಡು, ನೃತ್ಯ ಮತ್ತು ದಫ್ ಮೂಲಕ ಮನರಂಜಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ಸ್ವಾ | ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, “ಪ್ರತಿಯೊಂದು ಧರ್ಮವೂ ಬೋಧಿಸುವ ಮೌಲ್ಯಗಳನ್ನು ಗೌರವಿಸಿ. ಸಮಾಜದಲ್ಲಿ ಒಳ್ಳೆಯ ಮಾನವರಾಗಿ ಬಾಳಿ.” ಎಂದು ಹೇಳಿ ಈದ್ ಮಿಲಾದ್ ಶುಭಾಶಯವನ್ನು ಕೋರಿದರು.



ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯೆನೆಪೋಯ ಕಾಲೇಜಿನ ಪ್ರೊ |ಡಾ| ನಿಯಾಝ್ ಪಣಕಜೆ ರವರು ಆಗಮಿಸಿ ಪ್ರೀತಿ, ಕ್ಷಮೆ, ಶಾಂತಿ, ದಾನಧರ್ಮ ಮತ್ತು ಶಿಸ್ತು ಇವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಮೌಲ್ಯಗಳಲ್ಲ. ಇವು ಪ್ರತಿಯೊಬ್ಬ ಒಳ್ಳೆಯ ಮನುಷ್ಯನ ಜೀವನದ ಆಧಾರವಾಗಿವೆ. ವಿವಿಧ ಧರ್ಮಗಳು ನಮಗೆ ಕಲಿಸುವ ಉತ್ತಮ ಮೌಲ್ಯಗಳನ್ನು ಗೌರವಿಸಿ, ಒಳ್ಳೆಯ ಮನುಷ್ಯರಾಗಿ ಸಮಾಜದಲ್ಲಿ ಬದುಕುವುದು ನಮ್ಮ ಕರ್ತವ್ಯ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯ ಸ್ವಾ| ದೀಪಕ್ ಲಿಯೋ ಡೇಸ, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನೆಲ್ಸನ್ ಲಸ್ರಾದೋ, ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಲಿಯೋ ನೋರೊನ್ಹಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಪ್ರವೀಣ್ ಚಂದ್ರಶೆಟ್ಟಿ , ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.









