







ಧರ್ಮಸ್ಥಳ, : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಅಟಲ್ ಜೀ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಆ. 27 ರಂದು ನಡೆಯಿತು.



231 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಅಧ್ಯಕ್ಷ ಪ್ರೀತಮ್ ಡಿ, ಮಾಜಿ ಅಧ್ಯಕ್ಷ ರತ್ನವರ್ಮ ಜೈನ್, ಜಯರಾಮ್ ಭಂಡಾರಿ, ಯದುಪತಿ ಗೌಡ, ಭುಜಬಲಿ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಸಿಇಒ ಶಶಿಧರ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು.









