







ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟ ಕಲ್ಮಂಜ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಒಂದು ದಿನದ ರೈತ ಪಾಠ ಶಾಲೆಯನ್ನ ಬೆಳೆ ಸಮೀಕ್ಷೆ ಆಪ್ ಹಾಗೂ ಪೀಡೆ ನಾಶಕ ಇವುಗಳ ಬಗ್ಗೆ ತರಬೇತಿಯನ್ನು ಆ.14 ರಂದು ಕಲ್ಮಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಯಂತಿ ಇವರು ಪ್ರಾರ್ಥನೆಯನ್ನು ಮಾಡಿದರು. ಬಂದ ಅತಿಥಿಗಳನ್ನ ಎಂಬಿಕೆ ಶ್ರೀಮತಿ ಪೂಜಾ ಇವರು ಸ್ವಾಗತಿಸಿದರು. ಸ್ಕಂದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಬಂದ ಅತಿಥಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಸಭೆಯ ಅಧ್ಯಕ್ಷತೆಯನ್ನು ಶಿವರಾಮ್. T ಇವರು ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಅಧಿಕಾರಿ ಗಣೇಶ್ ಬೆಳೆ ಸಮೀಕ್ಷೆ ಆಪ್ ನಲ್ಲಿ ಯಾವ ತರ ಬೆಳೆಯನ್ನ ನಮೂದಿಸಬೇಕು ಹಾಗೂ ಅದರ ಪ್ರಯೋಜನಗಳನ್ನು ಬಗ್ಗೆ ರೈತರಿಗೆ ಮನಮುಟ್ಟುವಂತೆ ತಿಳಿಸಿದರು. ಸಮಗ್ರ ಪೀಡೆನಾಶಕ ಇವುಗಳ ಬಳಕೆ, ಇದರಿಂದಾಗುವ ಹಾನಿ ಸಮರ್ಪಕ ಬಳಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು
FID. Central ID ಇವುಗಳನ್ನು ಮಾಡುವ ಉದ್ದೇಶವನ್ನು ತಿಳಿಸಿದರು . ಬಿಟಿಎಂ ನವನೀತ ಮೇಡಂ ಹಾಗೂ ಗಾಯತ್ರಿ ಮೇಡಂ ಹಾಜರಿದ್ದರು .ಒಕ್ಕೂಟದ ಸಿಬ್ಬಂದಿಗಳು ಪದಾಧಿಕಾರಿಗಳು ಸಹಕರಿಸಿದರು. ಕೃಷಿ ಸಖಿ ಶ್ರೀಮತಿ ಪುಷ್ಪಲತ ನಿರೂಪಣೆ ಮಾಡಿ ಧನ್ಯವಾದ ನೀಡಿದರು. 40ಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆದುಕೊಂಡರು.









