






ಬೆಳ್ತಂಗಡಿ: ಮುಗುಳಿ ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ ಆ.15ರಂದು ನಡೆಯಿತು. ಧ್ವಜಾರೋಹಣವನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪಾರ್ವತಿ ನೆರವೇರಿಸಿ, ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಅತಿಥಿಗಳಾದ ಸನತ್ ಕುಮಾರ್ ಜೈನ್ ಮತ್ತು ವಂದನ ಲ್ಯಾಬಿನ ಮಾಲಕಿ ಸವಿತಾ ರಮೇಶ್ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ, ಶುಭ ಹಾರೈಸಿದರು. ಅಂಗನವಾಡಿ ಸಹಾಯಕಿ ಭಾರತಿ ಸಹಕರಿಸಿದರು. ಪುಟಾಣಿ ಮಕ್ಕಳು ಹಾಗೂ ಪೋಷಕರು, ಸ್ಥಳೀಯರು ಭಾಗವಹಿಸಿದ್ದರು.
ಬಾಲವಿಕಾಸ ಕಮಿಟಿ ಸದಸ್ಯರಾದ ಅಶೋಕ ಮತ್ತು ಫಾತಿಮಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಕೆ. ಅವರು ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.









