






ಉಜಿರೆ: ಗೆಳೆಯರ ಬಳಗ ಮುಂಡತೋಡಿ ವತಿಯಿಂದ ಸ. ಹಿ . ಪ್ರಾ ಶಾಲೆ ಮುಂಡತ್ತೋಡಿಯಲ್ಲಿ ಮಕ್ಕಳಿಗೆ ಉಚಿತವಾಗಿ ಐಡಿ ,ಬೆಲ್ಟ್ ,ಟೈ ಆ.15 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಶಿವಪ್ರಸಾದ್ ಮ್ಯಾನೇಜರ್ ಬ್ಯಾಂಕ್ ಆಫ್ ಬರೋಡ ಬೆಂಗಳೂರು ಭಾಗವಹಿಸಿದ್ದರು. ಅತಿಥಿಗಳಾಗಿ ಗೆಳೆಯರ ಬಳಗದ ಗೌರವಾಧ್ಯಕ್ಷ ಗಣೇಶ್ ಡಿ.ಪಿ., ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೋಂಡೆಲು , ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ಕೋಟ್ಯಾನ್, C K ಚಂದ್ರಕಲಾ ಮಾಜಿ ಜಿಲ್ಲಾ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸೇವಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೆಳೆಯರ ಬಳಗ ಪದಾಧಿಕಾರಿಗಳು, ಸದಸ್ಯರು ,ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾಭಿಮಾನಿಗಳು ಹಾಜರಿದ್ದರು. ಶಿಕ್ಷಕಿ ಉಷಾಲತಾ ಕಾರ್ಯಕ್ರಮ ನಿರೂಪಿಸಿದರು. ಗೆಳೆಯರ ಬಳಗ ಅಧ್ಯಕ್ಷ ವೆಂಕಪ್ಪ (ರವಿ) ಸ್ವಾಗತಿಸಿದರು. ಶಿಕ್ಷಕರಾದ ಪ್ರೀತಿ ವಂದಿಸಿದರು.









