







ಉಜಿರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಪೆರ್ಲ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಮುಖ್ಯ ಅತಿಥಿಗಳಾಗಿ ಶಿವಕುಮಾರ್ ಸೂರ್ಯ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ಉಪಸ್ಥಿತರಿದ್ದರು.



ಧ್ವಜಾರೋಹಣವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೆರವೇರಿಸಿದರು. ವೇದಿಕೆಯಲ್ಲಿ ಚಂದ್ರಕಲಾ, ಗೆಳೆಯರ ಬಳಗದ ಗೌರವಾಧ್ಯಕ್ಷ ಗಣೇಶ್ ಡಿ ಪಿ. ಮುಖ್ಯ ಶಿಕ್ಷಕಿ ಸೇವಂತಿ ನಿರಂಜನ್ ಉಪಸ್ತಿತರಿದ್ದರು. ಗೆಳೆಯರ ಬಳಗದ ವತಿಯಿಂದ ಮಕ್ಕಳಿಗೆ ಟೈ. ಬೆಲ್ಟ್ ಹಾಗೂ ಐಡಿ ವಿತರಿಸಲಾಯಿತು.

ಎಲ್ಲಾ SDMC ಸದಸ್ಯರು ಮತ್ತು ಪೋಷಕರು ಹಾಜರಿದ್ದರು.ಶಿಕ್ಷಕಿ ಉಷಲತಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಪ್ರೀತಿ ಕುಮಾರಿ ವಂದಿಸಿದರು.










