






ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯ ವತಿಯಿಂದ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ನಲ್ಲಿ ನಡೆದ 80 ನೇ ವರ್ಷದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಶಾಖಾಧಿಕಾರಿ ಸಂತೋಷ ರೆಡ್ಡಿ ನೆರವೇರಿಸಿ ಶುಭ ಹಾರೈಸಿದರು.



ಬಂಟ್ವಾಳ ಶಾಖೆಯ ಪ್ರಥಮ ಎಂ ಡಿ ಆರ್ ಟಿ ಪ್ರತಿನಿಧಿ ಪುಷ್ಪರಾಜ್ ಹೆಗ್ಡೆ, ಮತ್ತು ಪ್ರತಿನಿಧಿಗಳಿಗಾಗಿ ಆಯೋಜಿಸಿದ ಹೊಸ ವ್ಯವಹಾರದಲ್ಲಿ ಸಾಧನೆ ಗೈದ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ಪ್ರಜ್ವಲ್ ಕಾಂಪ್ಲೆಕ್ಸ್ ಮಾಲಕ ಪ್ರಮೋದ್ ಆರ್. ನಾಯಕ್, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಶಾಖಾಧಿಕಾರಿ ಚೇತನ್, ಅಭಿವೃದ್ಧಿ ಅಧಿಕಾರಿಗಳಾದ ಟಿ. ಡಿ. ರಾಘವೇಂದ್ರ, ಉದಯ ಶಂಕರ್, ಸಂದೀಪ್, ವಿನಯ, ಆಡಳಿತಾಧಿಕಾರಿ ಕೇಶವ ಎಂ, ಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ವಿನಯ ಕಾರ್ಯಕ್ರಮ ನಿರೂಪಿಸಿದರು.










