ಪುದುವೆಟ್ಟು ಶಾಲೆಯಲ್ಲಿ ವಿಶಿಷ್ಟವಾಗಿ ಜರುಗಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮ

0

​ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ (ಆಗಸ್ಟ್ 13, 2026) ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಅಟಿಡೊಂಜಿ ದಿನ ಕಾರ್ಯಕ್ರಮದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡ ರವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಪ್ರೌಢ ಶಾಲೆಯ ತುಳು ಶಿಕ್ಷಕ ಶಶಿಧರ್ ಡೆಚ್ಚರ್ ಮತ್ತು ಮೇಲಿನಡ್ಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಚಿನ್ನಯ ಗೌಡ ರವರು ಸ್ಥಳೀಯರಾದ ಕಮಲ ಹಾಗೂ ಶಾಲೆಯಹಿರಿಯ ಶಿಕ್ಷಕಿಯಾದ ತೇಜಾವತಿಯವರು ಉಪಸ್ಥಿತರಿದ್ದರು.

ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶಶಿಧರ್ ಮುಚ್ಚರು ಹಾಗೂ ಚಿನ್ನಯ್ಯ ಗೌಡರವರು ಚೆನ್ನಮಣೆ ಆಟ ಆಡಿ ಕಲಶಕ್ಕೆ ಅಕ್ಕಿ ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಚಿನ್ನಯ್ಯ ಗೌಡ ರವರು ಆಟಿ ತಿಂಗಳಲ್ಲಿ ಆಚರಿಸುವ ಆಚರಣೆಗಳು ಹಾಗೂಮಹತ್ವವನ್ನು ತಿಳಿಸಿಕೊಟ್ಟರು.

ನಂತರ ಮಾತನಾಡಿದ ಶಶಿಧರ್ ರವರು ಆಟಿ ತಿಂಗಳ ಮನೆ ಮದ್ದುಗಳು,ಪ್ರಸ್ತುತ ತುಳುವಿಗೆ ಇರುವ ಮನ್ನಣೇ, ತುಳುವಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪಗೌಡರವರು ಆಟಿ ತಿಂಗಳಲ್ಲಿ ಆಡುವಂತಹ ಆಟಗಳು ಮತ್ತು ಆಟಿ ಅಂದರೆ ಏನು, ಆಟಿಯಲ್ಲಿ ಬಳಸುವಂತಹ ಬೇರೆ ಬೇರೆ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕಮಲ ರವರು ಮಕ್ಕಳಿಗೆ ಅಜ್ಜಿ ಕಥೆಗಳನ್ನು ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ತುಳು ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಅಸೀನರಾಗಿದ್ದ ಎಲ್ಲ ಗಣ್ಯರನ್ನು ಶಾಲಾ ಶಿಕ್ಷಕರಾದ ಪವನ್ ಕುಮಾರ್ ರವರು ಸ್ವಾಗತಿಸಿದರು. ಗೌರೀಶ್ ಎಂ ಧನ್ಯವಾದಗೈದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯಾದ ಕುಮಾರಿ ಜಿತಿಕ್ಷರವರು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here