








ಬೆಳ್ತಂಗಡಿ: ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆ ನೀಡಿರುವ ಆರೋಪದಡಿ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಆ.೬ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಯಿಲ ಗ್ರಾಮದ ಸ.ನಂ. ೧೬೪/೨೦೧೮ರಲ್ಲಿ ೦.೦೧.೫೦ ಎಕರೆ ಜಾಗವನ್ನು ವಾಣಿಜ್ಯ ಉzಶಕ್ಕೆ ಭೂ ಪರಿವರ್ತನೆ ಮಾಡದೆ ವಾಣಿಜ್ಯ ವ್ಯವಹಾರದ ಉzಶಕ್ಕಾಗಿ ೩೦.೦೯.೨೦೨೫ರಂದು ಲಾಯಿಲ ಗ್ರಾಮ ಪಂಚಾಯತ್ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಆಗಿದ್ದ ಶ್ರೀನಿವಾಸ ಡಿ.ಪಿ. ಅವರು ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿದ್ದಾರೆ. ಭೂ ಪರಿವರ್ತನೆಯಾಗದೆ ಮತ್ತು ೯/೧೧ ಆಗದೆ ಅನಧಿಕೃತವಾಗಿ ವಾಣಿಜ್ಯ ಉzಶಕ್ಕೆ ಶ್ರೀನಿವಾಸ ಡಿ.ಪಿ. ಅವರು ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿ ಕಾನೂನು ಬಾಹಿರ ಕೃತ್ಯ ಮಾಡಿದ್ದಾರೆ. ಆದ್ದರಿಂದ ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಶ್ರೀನಿವಾಸ ಡಿ.ಪಿ. ಹಾಗೂ ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲಾಯಿಲ ಗ್ರಾಮಸ್ಥರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.









