ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪಾಲಕರ ಹಬ್ಬ

0

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಆಗಸ್ಟ್ 13 ರಂದು ಶಾಲಾ ಪಾಲಕರ ಹಬ್ಬವನ್ನು ಆಚರಿಸಲಾಯಿತು.

ಶಾಲಾ ಪಾಲಕರ ಪ್ರತಿಮೆಗೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡುವುದರ ಜೊತೆಗೆ ಪುಷ್ಪಾರ್ಚನೆಗೈಯಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೊಕ್ಕಡ ಸೈಂಟ್ ಜೋನ್ ದ ಬ್ಯಾಪ್ಟಿಸ್ಟ್ ಚರ್ಚ್ ನ ಧರ್ಮ ಗುರುಗಳಾದ ವಂದನೀಯ ಅನಿಲ್ ಡಿಸಿಲ್ವಾ ಆಗಮಿಸಿ ಮಕ್ಕಳಲ್ಲಿ ಕಲಿಕೆಯು ನಿರಂತರವಾಗಿರಬೇಕು.

ಕಲಿಕೆಗೆ ಬರುವ ಅಡೆತಡೆಗಳನ್ನು ನಿವಾರಿಸಿ ಯಶಸ್ಸನ್ನು ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಹಿತನುಡಿದು ಆಶೀರ್ವದಿಸಿದರು. ಶಾಲಾ ಸಂಚಾಲಕರಾದ ಅತೀ ವಂದನೀಯ ವೋಲ್ಟರ್ ಡಿಮೆಲ್ಲೋರವರು ಮಕ್ಕಳು ಏಕಾಗ್ರತೆ ಮತ್ತು ಆಸಕ್ತಿಯಿಂದ ಓದಿ ಜೀವನದಲ್ಲಿ ಸಾಧನೆ ಮಾಡಬೇಕೆಂದು ತಿಳಿಸಿ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಕ್ಲಿಫರ್ಡ್ ಪಿಂಟೋರವರು ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಒಂಭತ್ತನೇ ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ನೃತ್ಯ ಮತ್ತು ರೂಪಕದ ಮೂಲಕ ಪಾಲಕರ ದಿನದ ಮಹತ್ವವನ್ನು ಪ್ರಸ್ತುತಪಡಿಸಿ ಎಲ್ಲರ ಮನರಂಜಿಸಿದರು.

ಅಂತರ್ ಶಾಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿನಿಯರಾದ ನಿದಾ ಫಾತಿಮಾ ಶಾಲಾ ಪಾಲಕರ ದಿನದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಾದ ಬಾರಿಝಾ, ಫಾತಿಮಾ ಶಝಾ, ರೇಚಲ್, ಪ್ರದ್ಯುನ್, ಶಹರುಲ್ ಮತ್ತು ಆರನ್ ಸ್ವಾಗತಿಸಿ, ಅಲೀಶಾ ಸಾಂತ್ಮಯೋರ್ ವಂದಿಸಿದರು. ಮೃದುಲಾ ಮತ್ತು ಡೆಲೀನ ಅಲ್ಮೇಡ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಹಶಿಕ್ಷಕಿ ಪ್ರಭಾ ಗೌಡ ಮತ್ತು ಶ್ರೀಮತಿ ಸುಮಿತ್ರಾ ಸಹಕರಿಸಿದರು.

LEAVE A REPLY

Please enter your comment!
Please enter your name here