ವಕೀಲರ ಸಂಘದಿಂದ ಆಟಿದ ನೆಂಪು ಕಾರ್ಯಕ್ರಮ:ಮನುಷ್ಯರು ಪ್ರಕೃತಿ ನಿಯಮದಂತೆ ಬಾಗಬೇಕು ಬೀಗಬಾರದು : ಡಾ. ಮಹಾವೀರ್ ಜೈನ್

0

ಬೆಳ್ತಂಗಡಿ: ವಕೀಲರ ಸಂಘದ ವತಿಯಿಂದ ತುಳುನಾಡಿನ ಸಂಸ್ಕಾರ, ಸಂಸ್ಕೃತಿ, ಕೃಷಿ ಕಾಯಕ, ಜನರ ಆಚಾರ-ವಿಚಾರ, ಆಹಾರ ಪದ್ಧತಿಯ ವೈಶಿಷ್ಟ್ಯಗಳನ್ನು ಪುನರಪಿ ನೆನಪಿಸುವ ಆಟಿದ ನೆಂಪು ಕಾರ್ಯಕ್ರಮವು ಆ.13ರಂದು ವಕೀಲರ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ. ಎಂ.ಎಫ್.ಸಿ ಯವರಾದ ಮನು ಬಿ.ಕೆ. ಅವರು ನೆರವೇರಿಸಿ ಶುಭ ಹಾರೈಸಿದರು.ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್‌ ಎಸ್. ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು.ಎಸ್‌.ಡಿ.ಎಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಮಹಾವೀರ ಜೈನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿ, ಮನುಷ್ಯ ಪ್ರಕೃತಿಯಿಂದ ಕಲಿಯಬೇಕಾದದ್ದು ಬಹಳವಿದೆ. ಪೂರ್ವಜರ ಆಚರಣೆಗಳು ವೈಜ್ಞಾನಿಕವಾಗಿದ್ದು ಅವುಗಳನ್ನು ಪಾಲಿಸಬೇಕು.

ಮನುಷ್ಯರು ಬಾಗಬೇಕು ಬೀಗಬಾರದು. ಪ್ರಕೃತಿ ತಿಳಿಸದಂತೆ ಬದುಕಿ ಬಾಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ನಲಿಕೆ ಸಮುದಾಯದವರಿಂದ ಆಟಿ ಕಳೆಂಜದ ವೈಶಿಷ್ಟ್ಯತೆಯ ಸೊಬಗನ್ನು ಪ್ರದರ್ಶಿಸಲಾಯಿತು. ವಿವಿಧ ಬಗೆಯ ಆಟಿಯ ತಿಂಡಿ ತಿನಸುಗಳುಗಳನ್ನು ಭೋಜನಕ್ಕೆ ಉಣಬಡಿಸಲಾಯಿತು.ವಕೀಲರ ಸಂಘಕ್ಕೆ ನೂತನ ಸದಸ್ಯೆಯಾಗಿ ಸೇರ್ಪಡೆಗೊಂಡ ಸಾತ್ವಿಕ ರೈ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ. ಎಂ.ಎಫ್.ಸಿ ಯವರಾದ ರಾಮ ಲಿಂಗಪ್ಪ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಯವರಾದ ಶಶಾಂಕ್ ನಾಗೇಂದ್ರ ಭಟ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಮ್., ಉಪಾಧ್ಯಕ್ಷ ಶ್ರೀನಿವಾಸ ಗೌಡ, ಕೋಶಾಧಿಕಾರಿ ಮುಮ್ತಾಜ್ ಬೇಗಂ, ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಶಿವಕುಮಾ‌ರ್ ಎಸ್.ಎಮ್., ಸಹಕಾರಿ ಸರಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ, ಆಶಿತಾ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ವಕೀಲರ ಸಮಿತಿಯ ಸದಸ್ಯರು, ವಕೀಲರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಕೀಲರಾದ ಪ್ರತೀಕ್ಷಾ, ಶ್ರಾವ್ಯ ಹೇಮ ವಿನೋದ ಪ್ರಾರ್ಥಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಸ್ವಾಗತಿಸಿ, ಕೋಶಾಧಿಕಾರಿ ಮುಮ್ತಾಜ್ ಬೇಗಂ ವಂದಿಸಿದರು. ಸಂಘದ ಜೊತೆಕಾರ್ಯದರ್ಶಿ ಹರ್ಷಿತ್ ಹೆಚ್. ಹಾಗೂ ನಿಕಟಪೂರ್ವ ಅಧ್ಯಕ್ಷ ವಸಂತ ಮರಕಡ ನಿರೂಪಿಸಿದರು.

LEAVE A REPLY

Please enter your comment!
Please enter your name here