ಒಬ್ಬಂಟಿ ದಲಿತ ಮಹಿಳೆ ಚೋಮು ಅಜ್ಜಿಯ ಮನೆಗೆ ಮಗನಂತೆ ಆಸರೆಯಾದ ಶಾಸಕ ಹರೀಶ್ ಪೂಂಜ!

0

ಬೆಳ್ತಂಗಡಿ : ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ದಲಿತ ಸಮುದಾಯದ ಚೋಮು ನಲಿಕೆ ಎಂಬವರ ಮನೆಯ ಹಿಂಬದಿ ಗೋಡೆ ಸಂಪೂರ್ಣವಾಗಿ ಕುಸಿದು ಹಾನಿಗೊಳಗಾಗಿತ್ತು. ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿರುವ ಚೋಮು ಅಜ್ಜಿಯ ಪರಿಸ್ಥಿತಿಯನ್ನು ತಿಳಿದುಕೊಂಡ ಶಾಸಕ ಹರೀಶ್ ಪೂಂಜ ಅವರು ಸ್ಥಳಕ್ಕೆ ಭೇಟಿ ನೀಡಿ, ಮನೆಯ ದುರಸ್ತಿಗೆ ನೆರವಾಗುವ ಭರವಸೆ ನೀಡಿದರು.

ತಮ್ಮ ವೈಯಕ್ತಿಕ ಕಾಳಜಿಯಿಂದ ಮನೆಯ ಗೋಡೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸುವಂತೆ ಕಲ್ಮಂಜ–ಮುಂಡಾಜೆ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಶಾಸಕರು ಸೂಚಿಸಿದರು. ಶಾಸಕರ ಸೂಚನೆಯಂತೆ ಕಾರ್ಯಕರ್ತರು ತಕ್ಷಣ ಸ್ಪಂದಿಸಿ, ಒಂದೇ ದಿನದಲ್ಲಿ ಶ್ರಮದಾನದ ಮೂಲಕ ಮನೆಯ ಹಿಂಬದಿ ಗೋಡೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದರು.

ಮಳೆಯಿಂದ ಮನೆ ಹಾನಿಗೊಳಗಾದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚೋಮು ಅಜ್ಜಿಗೆ ಶಾಸಕ ಹರೀಶ್ ಪೂಂಜ ಅವರು ಮಗನಂತೆ ಆಸರೆಯಾಗಿ ನಿಂತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ, ಪಕ್ಷದ ಕಾರ್ಯಕರ್ತರ ಮೂಲಕ ಮಾನವೀಯ ನೆರವು ಒದಗಿಸಿದ ಶಾಸಕರ ಕಾರ್ಯಕ್ಕೆ ಸ್ಥಳೀಯರಿಂದ ಅಭಿನಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಜನಪರ ಕಾಳಜಿಯೊಂದಿಗೆ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿರುವ ಶಾಸಕ ಹರೀಶ್ ಪೂಂಜ ಅವರಿಗೆ ಚೋಮು ಅಜ್ಜಿ ಹಾಗೂ ಸ್ಥಳೀಯರು ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here