







ಬೆಳ್ತಂಗಡಿ : ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಆ.16ರಂದು ಬೆಳಿಗ್ಗೆ ಗಂಟೆ 10ಕ್ಕೆ ಮೂಲ್ಕಿ ರಾಷ್ಟೀಯ ಬಿಲ್ಲವರ ಮಹಾಮಂಡಲದ ಜಯ ಸಿ. ಸುವರ್ಣ ಸಭಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧೀಶ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.


ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮೂಲ್ಕಿ ಶಾಸಕಉಮಾನಾಥ್ ಕೋಟ್ಯಾನ್, ರಾಷ್ಟೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ ಜೆ., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಶ್ರೀ ಕ್ಷೇತ್ರ , ಗೆಜ್ಜೆಗಿರಿ ಡೆವಲಪ್ಮೆಂಟ್ ಸಮಿತಿ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಸಮಾಜ ಸೇವಕಿ ಗೀತಾಜಲಿ ಸುವರ್ಣ,ಸುಧಾಕರ್ ಎಂ .ಪೂಜಾರಿ ಕಾರ್ಕಳ,ಪೃಥ್ವಿ ಅಂಬರ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಸ್.ಆರ್. ಆರ್.ಮಸಲಾ ಇದರ ಡೈರೆಕ್ಟರ್ ಶೈಲೆಂದ್ರ ವೈ. ಸುವರ್ಣ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್ ಪೂಜಾರಿ ಮೂಡುಕೋಡಿ ತಿಳಿಸಿದರು.









