







ಉಜಿರೆ: ಎಸ್ ಡಿ ಎಂ ಕಾಲೇಜು (ಸ್ವಾಯತ್ತ) ಉಜಿರೆ, ಹಿರಿಯ ವಿದ್ಯಾರ್ಥಿ ಸಂಘ (ರಿ.), ಉಜಿರೆ ವತಿಯಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ “ಎಸ್.ಡಿ.ಎಂ. ನೆನಪಿನಂಗಳ” ವಿದ್ಯಾರ್ಥಿವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ, ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆ. 11ರಂದು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರುಗಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.


ವೈದ್ಯರುಗಳಾದ ಶಕ್ತಿ ಕ್ಲಿನಿಕ್ ಉಜಿರೆಯ ಡಾ| ಪ್ರಕಾಶ್ ಬಿ., ಗಿರಿಜಾ ಡೆಂಟಲ್ ಕ್ಲಿನಿಕ್ ಉಪ್ಪಿನಂಗಡಿಯ ಡಾ| ರಾಜಾರಾಮ ಕೆ. ಬಿ., ಶ್ರೀದಂತ ಚಿಕಿತ್ಸಾಲಯ ಉಜಿರೆಯ ಡಾ| ಎಂ. ಎಂ. ದಯಾಕರ್, ಮಂಗಳೂರಿನ ಹಿರಿಯ ಯೂರೋಲಾಜಿಸ್ಟ್ ಡಾ| ಸದಾನಂದ ಪೂಜಾರಿ, ಗುರುವಾಯನಕೆರೆ ಅಭಯ ಹಾಸ್ಪಿಟಲ್ ನ ಡಾ| ಶ್ರೀಹರಿ, ನಾವೂರದ ಆರೋಗ್ಯ ಕ್ಲಿನಿಕ್ ನ ಡಾ| ಪ್ರದೀಪ್ ಆಟಿಕುಕ್ಕೆ, ಬೆಳ್ತಂಗಡಿಯ ಗಣೇಶ್ ಮೆಡಿಕಲ್ ಕೇರ್ ನ ಡಾ| ಶಶಿಕಾಂತ ಡೋಂಗ್ರೆ ಉಜಿರೆಯ ಇ ಎನ್ ಟಿ ತಜ್ಞ ಡಾ| ರಂಜನ್ ಕುಮಾರ್ , ಮೂಡಬಿದ್ರೆಯ ಸುಷಾ ಡೆಂಟಲ್ ಕೇರ್ ನ ಡಾ| ರೇಷ್ಠಾ, ಉಜಿರೆಯ ವಿನ್ಯಾಸ ದಂತ ಚಿಕಿತ್ಸಾಲಯದ ಡಾ| ಶ್ರೀಹರ್ಷ ರವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ್ ಪ್ರಭು ಉಪಸ್ಥಿತರಿದ್ದರು. ಬಳಿಕ ಅರ್ಹ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಚೆಕ್ ಹಸ್ತಾಂತರ ನಡೆಯಿತು.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಪಿ. ಸ್ವಾಗತಿಸಿದರು. ಡಾ. ದಿವಾಕರ ಕೆ ಹಾಗೂ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿಕೆ ಧನಂಜಯ್ ರಾವ್ ಧನ್ಯವಾದವಿತ್ತರು.









