ಆ. 12 ನಾವೂರು ತುಳುನಾಡಿನ ಸಂಪ್ರದಾಯದ’ಆಟಿ ಸುಗಿಪು’ ಹಾಗೂ ಕಷಾಯ-ದೋಸೆ ವಿತರಣಾ ಕಾರ್ಯಕ್ರಮ​

0

ನಾವೂರು:​ತುಳುನಾಡಿನ ವಿಶಿಷ್ಟ ಹಾಗೂ ಆರೋಗ್ಯಕರ ಸಂಪ್ರದಾಯಗಳಲ್ಲಿ ಒಂದಾದ ‘ಆಟಿ ಅಮಾವಾಸ್ಯೆ’ಯ ಪವಿತ್ರ ದಿನದ ಹಿನ್ನೆಲೆಯಲ್ಲಿ, ನಾವೂರಿನ ನವೋದಯ ಯುವಕ ಮಂಡಲ (ರಿ.) ವತಿಯಿಂದ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ “ಆಟಿ ಸುಗಿಪು” ವಿಶಿಷ್ಟ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಆ. 12 ನಾವೂರು ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.​

ಆಟಿ ತಿಂಗಳ ವಿಶೇಷತೆಯಾದ, ಆರೋಗ್ಯವರ್ಧಕ ಔಷಧೀಯ ಗುಣಗಳಿರುವ ಸಾಂಪ್ರದಾಯಿಕ ‘ಪಾಲೆದ ಕಷಾಯ’ ಹಾಗೂ ಬಾಯಲ್ಲಿ ನೀರೂರಿಸುವ ರುಚಿಕರ ‘ತಜೆಂಕ್ ದೋಸೆ’ಯನ್ನು ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ.

LEAVE A REPLY

Please enter your comment!
Please enter your name here