







ಕಲ್ಮಂಜ ಗ್ರಾಮದ ಬಿಲ್ಲವ ಸಮಾಜ ಭಾಂದವರು ಸೇರಿ ಆ.9ರಂದು ಶ್ರೀ ಗುರುದೇವ ಮಠದ ಸಭಾಂಗಣದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕಲ್ಮಂಜ ಗ್ರಾಮ ಸಮಿತಿಯನ್ನು ರಚಿಸಲಾಯಿತು.



ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ ಪ್ರಸಾದ್ ಭಾಗವಹಿಸಿ ನೂತನ ಗ್ರಾಮ ಸಮಿತಿಗೆ ಸಂಘ ರಚನೆಯಿಂದ ಸಮಾಜಕ್ಕೆ ಸಿಗುವ ಪ್ರಯೋಜನದ ಬಗ್ಗೆ ಮಾಹಿತಿಯನ್ನು ಕೊಟ್ಟು ಶುಭ ಹಾರೈಸಿದರು.
ಕಲ್ಮಂಜ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಸಂಪದ ನಿಲಯ, ಕಾರ್ಯದರ್ಶಿಯಾಗಿ ಸುನಿಲ್ ಕನ್ಯಾಡಿ, ಕೋಶಾಧಿಕಾರಿಯಾಗಿ ರುಕೇಶ್ ಕಲ್ಮಂಜ, ಉಪಾಧ್ಯಕ್ಷರಗಳಾಗಿ ರಮಾನಂದ ಪೂಜಾರಿ ಗಾಡಿ ಕೊಟ್ಟಿಗೆ, ನಾರಾಯಣ ಬಂಗೇರ ಬಳ್ಳಿದಡ್ಡ, ಪ್ರಶಾಂತ್ ಪೂಜಾರಿ ಹುಂಕ್ರೋಟ್ಟು, ಗೌರವಾಧ್ಯಕ್ಷರಾಗಿ ತುಕರಾಮ್ ಸಾಲ್ಯಾನ್ ಆರ್ಲ, ಮತ್ತು ಸಮಾಜ ಭಾಂದವರಿಗೆ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿ ಕಲ್ಮಂಜ ಗ್ರಾಮ ಸಮಿತಿಯನ್ನು ರಚಿಸಲಾಯಿತು.









