







ಬಂಗಾಡಿ: ಇಂದಬೆಟ್ಟು ವಲಯದ ಇಂದಬೆಟ್ಟು ಕಾರ್ಯ ಕ್ಷೇತ್ರದ ಶ್ರೀ ವೀರಭದ್ರ ದೇವಸ್ಥಾನ, ಲಿಂಗತ್ಯಾರು ಬಂಗಾಡಿ ಇಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.


ದೇವಸ್ಥಾನದ ಆಡಳಿತ ಮುಖ್ಯಸ್ಥ ಬಿ. ವೀರಪ್ಪ ಮೊಯಿಲಿ, ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ, ಪದ್ಮ ಜ್ಞಾನ ವಿಕಾಸದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ನಮನ ತಂಡದ ಸದಸ್ಯರಾದ ಬೊಮ್ಮಯ್ಯ ಮೊಯಿಲಿ ಅವರು ಈ ದಿನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಸೇವಾ ಪ್ರತಿನಿಧಿ ಶೈಲಾ ಅವರು ಉಪಸ್ಥಿತರಿದ್ದ ಎಲ್ಲರಿಗೂ ವಂದಿಸಿದರು.









