ಕರ್ನಾಟಕ ಟಿವಿ “BEST MLA” ಪ್ರಶಸ್ತಿ: ಶಾಸಕ ಹರೀಶ್ ಪೂಂಜಾ ಅವರಿಗೆ ನಾವೂರು ದೇವಸ್ಥಾನದಿಂದ ಸನ್ಮಾನ

0

ನಾವೂರು, ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿ ಕರ್ನಾಟಕ ಟಿವಿಯವರು ಬೆಳ್ತಂಗಡಿ ತಾಲೂಕು ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡ ಜನಸ್ನೇಹಿ ಕಾರ್ಯಕ್ರಮಗಳನ್ನು ಪರಿಗಣಿಸಿ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “BEST MLA”ಪ್ರಶಸ್ತಿಗೆ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ಅವರನ್ನು ಆಯ್ಕೆ ಮಾಡಿ ಗೌರವಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ (ರಿ), ನಾವೂರು ಮತ್ತು ನಾವೂರಿನ ಭಕ್ತಾದಿಗಳ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಕ್ತಾದಿಗಳು, ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ರಸ್ತೆ, ಶಿಕ್ಷಣ, ಆರೋಗ್ಯ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.ಸನ್ಮಾನ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಡಾ. ಪ್ರದೀಪ್. ಎ ನಾವೂರು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದರ್ಣಪ್ಪ. ಕೆ, ಸದಸ್ಯರಾದ ಗಣೇಶ್ ಕನಾಲು, ಹರೀಶ್ ಕಾರಿಂಜ, ಗಣೇಶ್ ಗೌಡ ನೆಲ್ಲಿಪಲಿಕೆ, ತನಿಯಪ್ಪ ಕಿರ್ನಡ್ಕ, ತಿಮ್ಮಪ್ಪ ಕಿರ್ನಡ್ಕ, ಯುವರಾಜ್ ಭಂಡಾರಿ, ಪೂವಪ್ಪ ಗೌಡ ಪುನ್ಕೇತ್ಯಾರು, ಸುರೇಶ್ ಗೌಡ ಗೋಳಿದಡಿ, ಪ್ರದೀಪ್ ಗೌಡ ನಾಗಾಜೆ, ಸುರೇಶ್ ಪೂಜಾರಿ ಪೊಯ್ಯೆಲೆ, ಜಗದೀಶ್ ಇಡ್ಯಾಲ, ನಾವೂರು ಪ್ರೌಢಶಾಲಾ ದೈಹಿಕ ಶಿಕ್ಷಕ ಸತೀಶ್ ಸಾಲ್ಯಾನ್ ಮೊರ್ತಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಿಯಾ ಲಕ್ಷ್ಮಣ ಸಂಪಿಂಜ, ರೂಪ ಭಂಡಾರಿ, ಡಾ. ಕವಿತಾ ಪ್ರದೀಪ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಸುನಂದ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here