ಬೆಳ್ತಂಗಡಿ ಲೋಬೊ ಮೋಟರ್ಸ್ ನಲ್ಲಿ ಆಟಿ ಕೂಟ

0

ಬೆಳ್ತಂಗಡಿ ಸಂತೆಕಟ್ಟೆ ಬಳಿ, ಲೋಬೊ ಟವರ್ ನಲ್ಲಿ ಕಾರ್ಯಾಚರಿಸುವ ಟಿ ವಿ ಎಸ್ ಲೋಬೊ ಮೋಟರ್ಸ್ ನಲ್ಲಿ ಆಟಿ ಕೂಟ ಏರ್ಪಡಿಸಲಾಯಿತು.

ಇಲ್ಲಿಯ ಮಾಲಕರು ಹಾಗೂ ಸಿಬ್ಬಂದಿಗಳು ಒಟ್ಟು ಸೇರಿ ತಮ್ಮ ತಮ್ಮ ಮನೆಯಲ್ಲಿ ವಿಶಿಷ್ಟ ಬಗೆಯ ಖಾದ್ಯಗಳನ್ನು ತಯಾರಿಸಿ ಕಚೇರಿಯಲ್ಲಿ ಸರ್ವರೂ ಸಹ ಭೋಜನ ಸ್ವೀಕರಿಸಿ ವೈಶಿಷ್ಟ ವಾಗಿ ಆಟಿ ಕೂಟ ಆಚರಣೆ ನಡೆಸಿದರು.

ಸುಮಾರು 37ಬಗೆಯ ಖಾದ್ಯ ತಯಾರಿಸಲಾಗಿತ್ತು. ಇದೆ ಸಂದರ್ಭದಲ್ಲಿ ಬೆಳ್ತಂಗಡಿ ಯಲ್ಲಿ ಟಿವಿಎಸ್ ನಲ್ಲಿ ಮೆಖ್ಯಾನಿಕ್ ಆಗಿ ಕಳೆದ 22ವರ್ಷ ಸೇವೆ ಸಲ್ಲಿಸಿ ಅನುಭವ ವಿರುವ ಸಿಬ್ಬಂದಿ ಗಣೇಶ್ ಇವರನ್ನು ಸಂಸ್ಥೆಯ ಆಡಳಿತ ಮಂಡಳಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಟಿ ವಿ ಎಸ್ ವಿತಾರಕರಾದ ಮಂಗಳೂರಿನ ರಾಧಾ ಟಿ ವಿ ಎಸ್ ಡಿವಿಜನಲ್ ಮ್ಯಾನೇಜರ್ ರಾಜೇಶ್ ಎ ಡಿ ದೇವೋಲಪ್ಮೆಂಟ್ ಮೆನೇಜರ್ ರಾಘವೇಂದ್ರ, ಸರ್ವಿಸ್ ಎಚ್ ಓ ಡಿ ಪ್ರಿತೇಶ್ ಉಪಸ್ಥಿತರಿದ್ದರು.

ಮಾಲಕರಾದ ರೋನಾಲ್ಡ್ ಲೋಬೊ ರವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ವಂದಿಸಿದರು. ನಂತರ ಸರ್ವರೂ ಸಹ ಭೋಜನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here