







ತೆಕ್ಕಾರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಉರ್ಲಡ್ಕ ಎಂಬಲ್ಲಿ ಆ. 7 ರಂದು ಸುರಿದ ಭಾರೀ ಮಳೆಗೆ ಅಬೂಬಕ್ಕರ್ ಮತ್ತು ಸುಲೈಮಾನ್ ಎಂಬುವರ ಮನೆ ಹಾನಿಗೊಂಡು ಕುಸಿದು ಬಿದ್ದಿದೆ.ಮಳೆ ಹೆಚ್ಚಾದ ಕಾರಣ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದಿದೆ.


ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಸ್ಥಳಕ್ಕೆ ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ತೆಕ್ಕಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀನ, ಪಂಚಾಯತ್ ಸಿಬ್ಬಂದಿ ಕಲಂದರ್, ಗ್ರಾಮ ಆಡಳಿತಾಧಿಕಾರಿ ರಫಿಕ್ ಮುಲ್ಲಾ, ಗ್ರಾಮ ಸಹಾಯಕ ರಾಜೇಶ್ ಹಾಗೂ ಪಂಚಾಯತ್ ಮಾಜಿ ಸದಸ್ಯ ಅನ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.









