






ಉಪ್ಪಿನಂಗಡಿ ಯಿಂದ ಮದ್ವ ಕಡೆಗೆ ತೆರಳುತ್ತಿದ್ದ ಲಾರಿಯೊಂದು ರಸ್ತೆ ಬದಿ ಚರಂಡಿಗೆ ಜಾರಿದ ಘಟನೆ ಮಚ್ಚಿನ ಗ್ರಾಮದ ಕಾರಂದೂರು ಬಳಿ ಸಂಭವಿಸಿದೆ.



ಚಲಿಸುತ್ತಿದ್ದ ಲಾರಿಯ ಬೋಲ್ಟ್ ಕಟ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿತ್ತು. ತಕ್ಷಣವೇ ಎಚ್ಚೆತ್ತ ಚಾಲಕನ ಮುಂಜಾಗ್ರತೆ ಹಾಗೂ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವರದಿ: ಹರ್ಷ ಬಳ್ಳಮಂಜ









