ಅಳದಂಗಡಿಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಟಿದ ಕಮ್ಮೆನ, ವಿವಿಧ ಸ್ಪರ್ಧೆ

0

ಅಳದಂಗಡಿ : ಕೆ ಎಸ್ ಟಿ ಎ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್,ಕ್ಷೇತ್ರ ಸಮಿತಿ ಬೆಳ್ತಂಗಡಿ ಹಾಗೂ 9 ವಲಯಗಳು ಸೇರಿಕೊಂಡು ಆಟಿದ ಕಮ್ಮೆನ ಮತ್ತು ಆಟೋಟ ಸ್ಪರ್ಧೆ ಆ. 2ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜು ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಬೆಳಿಗ್ಗೆ ಆಟೊಟ ಸ್ಪರ್ಧೆಯ ಉದ್ಘಾಟನೆಯನ್ನು ಪತ್ರಕರ್ತ ತುಕಾರಾಂ ಬಿ. ನೆರವೇರಿಸಿದರು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೆನ್ಸಿ ಡಿಸೋಜಾ ಪ್ರಾಸ್ತಾವಿಕ ಮಾತನಾಡಿ ಅಸೋಸಿಯೇಷನ್ ಪ್ರಾರಂಭ ಹಾಗೂ ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಟೈಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಅವರ ರೂಪ ಚಂದ ಕಾಣಬೇಕಾದರೆ ನಾವು ತೊಡುವ ಬಟ್ಟೆ ಅದರ ವಿನ್ಯಾಸ ಯಾವುದೇ ರೀತಿಯಲ್ಲಿ ಮಾಡಿಕೊಡುವ ಟೈಲರ್ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಎಲ್ಲರೂ ಜಾತಿ ಭೇದ ಮರೆತು ನಾವೆಲ್ಲರೂ ಒಂದೇ ಕುಟುಂಬ ಎಂಬಂತೆ ಒಗ್ಗೂಡಿದ್ದೀರಿ , ಹೀಗೇನೇ ನಿಮ್ಮ ಒಬ್ಬಟ್ಟು ಕಾರ್ಯವೈಕರಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ನಿವೃತ್ತ ರಾ, ಹೆ, ಮುಖ್ಯ ಅತಿಯಂತರ ಶಿವಪ್ರಸಾದ್ ಅಜಿಲ ಇವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಟೈಲರ್ ವೃತ್ತಿ ಬಾಂಧವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು , ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ಶುಭ ಹಾರೈಸಿದರು, ಟೈಲರ್ ಸಹಕಾರ ಸಂಘದ ಅಧ್ಯಕ್ಷರು ಮಾಜಿ ಕ್ಷೇತ್ರ ಸಮಿತಿಯ ಅಧ್ಯಕ್ಷ ವಲೇರಿಯನ್ ರೊಡ್ರೀಗಸ್ ಮಾತನಾಡಿ ಟೈಲರ್ ಅಸೋಸಿಯೇಷನ್ ನಿನ್ನ ಪ್ರಾರಂಭದ ದಿನಗಳನ್ನು ನೆನಪಿಸಿಕೊಂಡರು.

ಬೆಳ್ತಂಗಡಿ ನೋಟರಿ ವಕೀಲ ಮುರಳಿಧರ ಭಟ್ ಮಾತನಾಡಿ ಯೋಧರು ಗಡಿಯಲ್ಲಿ ಹೇಗೆ ದೇಶ ಕಾಯುತ್ತಾರೋ ಹಾಗೇನೆ ನಮ್ಮ ಮಾನ ಕಾಪಾಡುವ ಯೋಧರು ಟೈಲರ್ ಗಳು ಎಂದರು. ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ ಆಡಳಿತ ಪಾಲುದಾರ ಮೋಹನ್ ಸುವರ್ಣ ಇವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು, ಸಭೆಯಲ್ಲಿ 9 ವಲಯದ ಹಿರಿಯ ಟೈಲರ್ ರವರನ್ನು ಗೌರವಿಸಲಾಯಿತು, ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಉಪಾಧ್ಯಕ್ಷೆ ವೇದಾವತಿ ಜನಾರ್ಧನ್,ಕ್ಷೇತ್ರದ ಕೋಶಾಧಿಕಾರಿ ಶಶಿಕಲಾ ಗೋಪಾಲ್ ,ಉಪಾಧ್ಯಕ್ಷರು ವಸಂತ ಸ್ವಾತಿ ಟೈಲರ್, ಹಾಗೂ 9 ವಲಯದ ಅಧ್ಯಕ್ಷರುಗಳು ಆಸೀನರಾಗಿದ್ದರು. ಜಿಲ್ಲಾ ಸಮಿತಿಯ ಸದಸ್ಯ ಕುಶಾಲಪ್ಪ ಗೌಡ, ಶಾಂಭವಿ ಪಿ.ಬಂಗೇರ ರವೀಂದ್ರ ಗೇರುಗಟ್ಟೆ, ನಾಗೇಶ್ ಕುಮಾರ್, ಕ್ಷೇತ್ರದ ಪದಾಧಿಕಾರಿಗಳು, ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹರಿಣಿ ಕೆಂಬರ್ಜೆ ಪ್ರಾರ್ಥನೆ ನೆರವೇರಿಸಿದರು. ಸದಾನಂದ ಸಾಲ್ಯಾನ್ ಸ್ವಾಗತಿಸಿ ಆಕಾಶ್ ಗೇರುಗಟ್ಟೆ ನಿರೂಪಿಸಿದರು.ಶಾಂಭವಿ ಪಿ ಬಂಗೇರ ವಂದಿಸಿದರು.

LEAVE A REPLY

Please enter your comment!
Please enter your name here