ಶಿರ್ಲಾಲು: ಅತಿವೃಷ್ಠಿಯಿಂದ ಕಳಿಯೂರು ಆಣೆಕಟ್ಟು ಒಡೆದು ಹೋಗಿ ಕಡಿತಗೊಂಡ ಸಂಪರ್ಕ; ಪರದಾಡುತ್ತಿರುವ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು​

0

ಬೆಳ್ತಂಗಡಿ : ಶಿರ್ಲಾಲು ಗ್ರಾಮದ ಗುಡ್ಡೆ ಮಜಲು ಎಂಬಲ್ಲಿ ಭಾರಿ ಮಳೆ ಹಾಗೂ ಅತಿವೃಷ್ಠಿಯ ಕಾರಣದಿಂದ ಆಣೆಕಟ್ಟು (ಡ್ಯಾಮ್) ಒಡೆದು ಹೋಗಿದ್ದು, ಸ್ಥಳೀಯರಿಗೆ ಸಂಪರ್ಕ ಕಡಿತಗೊಂಡಿದೆ.​

ಶಿರ್ಲಾಲು ವಾರ್ಡ್ ನಂ. 9ರ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದಲ್ಲಿ ನಳದ ನೀರು ಹಾಗೂ ಓಡಾಟಕ್ಕೆ ನಿರ್ಣಾಯಕವಾಗಿದ್ದ ಈ ಕಾಲು ಸಂಕವೇ (ಕಿರು ಸೇತುವೆ) ಸ್ಥಳೀಯ ನಿವಾಸಿಗಳಿಗೆ ಏಕೈಕ ದಾರಿಯಾಗಿತ್ತು.​

​ಶಾಲಾ ಮಕ್ಕಳ ಪರದಾಟ: ಈ ದಾರಿಯ ಮೂಲಕವೇ ನಿತ್ಯ ನೂರಾರು ಮಕ್ಕಳು ಶಾಲೆಗೆ ತೆರಳಬೇಕಾಗಿದ್ದು, ಸಂಪರ್ಕ ಕಡಿತಗೊಂಡಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಿದೆ.25ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಬಂದ್: ಈ ಕಾಲು ಸಂಕ ಮುರಳಿ ಹೋಗಿರುವುದರಿಂದ ಅಂದಾಜು 25ಕ್ಕೂ ಅಧಿಕ ಕುಟುಂಬಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.

LEAVE A REPLY

Please enter your comment!
Please enter your name here