






ಉಜಿರೆ: ಉಜಿರೆ ಪೇಟೆಯಿಂದ ಬೆಳ್ತಂಗಡಿ ಬರುವ ರಸ್ತೆಯಲ್ಲಿ ಪೇಟೆ ಬಳಿಯ ಭಾರತ್‌ಐರನ್ ವರ್ಕ್ಸ್ ಮುಂಭಾಗದ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿದು, ವಾಹನ ಸವಾರರು ಪರದಾಡುವಂತಾತಾಗಿದೆ. ರಸ್ತೆ ಬದಿಯ ಅಂಗಡಿಗಳಿಗೂ ನೀರು ನುಗ್ಗಿದೆ.





ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಬಳಿ, ಚರಂಡಿಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಕಾಣದೆ ವಾಹನ ಸವಾರರು ಪರದಾಡುವಂತಾಗಿದೆ.









