






ಬೆಳ್ತಂಗಡಿ: ತಾಲೂಕು ಬಿಎಂಎಸ್ ರಿಕ್ಷಾ ಚಾಲಕ ಸಂಘದ ನೇತೃತ್ವದಲ್ಲಿ ವೇಣೂರು ರಿಕ್ಷಾ ಚಾಲಕ ಸಂಘದ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಈ ಶ್ರಮ ಮತ್ತು ಸ್ಮಾರ್ಟ್ ಕಾರ್ಡ್ (ಚಾಲಕರ ಕಾರ್ಮಿಕ ಕಾರ್ಡ್) ನೊಂದಣಿ ಅಭಿಯಾನ ಆ.1ರಂದು ನಡೆಯಿತು.


ಬಿಎಂಎಸ್ ರಾಜ್ಯ ಕಾರ್ಯದರ್ಶಿ ಎ.ಜೈ ರಾಜ್ ಸಾಲಿಯಾನ್, ಸಂಘದ ಉಪಾಧ್ಯಕ್ಷ ಲವಕುಮಾರ್, ಸಂಘದ ಕೋಶಾಧ್ಯಕ್ಷ ಪ್ರಶಾಂತ್, ವೇಣೂರು ರಿಕ್ಷಾ ಚಾಲಕ ಸಂಘದ ಪ್ರಮುಖರಾದ ಶೇಖರ್ ಪೂಜಾರಿ, ಬಶೀರ್ ವೇಣೂರು, ಹರೀಶ್ ವೇಣೂರು ಬಿಎಂಎಸ್ ಕಚೇರಿ ಸಿಬ್ಬಂದಿ ಭವ್ಯ ಪ್ರಶಾಂತ್ ಉಪಸ್ಥಿತರಿದ್ದರು.









