ಗೇರುಕಟ್ಟೆ: ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯಲ್ಲಿ ಅನಧಿಕೃತ ಮಣ್ಣು ಸಾಗಾಟ: ತಕ್ಷಣ ಕ್ರಮ ವಹಿಸಲು ಸಾರ್ವಜನಿಕರ ಆಗ್ರಹ

0

ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಪೇಟೆಯ ಕೆನರಾ ಬ್ಯಾಂಕ್ ಬಳಿ ಖಾಸಗಿ ವ್ಯಕ್ತಿಯೊಬ್ಬರು ಹೊಸ ಕಟ್ಟಡ ಕಟ್ಟುವ ನೆಪದಲ್ಲಿ ಪಕ್ಕದಲ್ಲಿ ಹಳೇ ಕಟ್ಟಡಗಳಿದ್ದರೂ ಈ ವಿಪರೀತ ಮಳೆ ಬರುತ್ತಿರುವ ಸಮಯದಲ್ಲಿ ಅನಧಿಕೃತವಾಗಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯಲ್ಲಿ ಟಿಪ್ಪರ್ ಮೂಲಕ ಮಣ್ಣು ಸಾಗಾಟ ಮಾಡಿ ರಸ್ತೆ ಪೂರ್ತಿ ಕೆಸರುಮಯವಾಗಿದೆ.

ಸಾರ್ವಜನಿಕರಿಗೆ, ಸ್ಥಳೀಯ ಸರಕಾರಿ ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ನಡೆದಾಡಲೂ ಸಾಧ್ಯವಾಗದೇ ವಾಹನ ಸವಾರರಿಗೆ ಕೂಡಾ ಸಂಚರಿಸಲು ತುಂಬಾ ತೊಂದರೆ ಆಗಿ ಅಪಘಾತವಾಗುವ ಸಂಭವ ಇದೆ. ತಕ್ಷಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here