ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡ ನಿಧನ

0

ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಜಾಲು ಎಂಬಲ್ಲಿರುವ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡ ಅಲ್ಪಕಾಲದ ಅನಾರೋಗ್ಯದ ಬಳಿಕ ತನ್ನ 70 ನೇ ವರ್ಷ ಪ್ರಾಯದಲ್ಲಿ ಜು. 31 ರಂದು ಮುಂಜಾನೆ ನಿಧನರಾಗಿದ್ದಾರೆ.

ಅವರಿಗೆ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಗೌರವ ಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದರು. ಕಳೆದ ತಿಂಗಳು ಮೆದುಳಿನ ತೀವ್ರರಕ್ತಸ್ರಾವದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಹತ್ತು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು.

ಮೃತರು 10 ನೇ ತರಗತಿ ತನಕ ಓದಿ ನಂತರ 50 ವರ್ಷದ ಹಿಂದೆಯೇ ಮಂಗಳೂರಿನ ಹಂಚಿನ‌ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ಟೈಲ್ಸ್ ವರ್ಕರ್ಸ್ ಯುನಿಯನ್ (ಸಿಐಟಿಯು) ನ ಸ್ಥಾಪಕ ಸದಸ್ಯರಾಗಿದ್ದರು. ಅಲ್ಲೇ ಪಕ್ಷದ ಸದಸ್ಯರಾಗಿ ಸೇರಿದ ಅವರು ಬಳಿಕ 1996 ,ರಿಂದ ಪಕ್ಷದ ಪಟ್ರಮೆ ಗ್ರಾಮದ ಶಾಖೆಯ ಸದಸ್ಯರಾಗಿ ಪಕ್ಷದ‌ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಾ, ಯುವ ಸಂಗಾತಿಗಳಿಗೆ ಮಾರ್ಗದರ್ಶಕರೂ ಆಗಿದ್ದರು.

ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ‌ ಎಂದಿರುವ‌ ಪಕ್ಷ, ಸಮಾಜದ ಕುರಿತಾಗಿನ ಅವರ ಆಶಯಗಳ ಈಡೇರಿಕೆಗೆ ಶ್ರಮಿಸುವುದೇ ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದರು. ಮೃತರು ಪತ್ನಿ ಧರ್ನಮ್ಮ, ಮಗ ಯೋಗೀಶ್, ಮಗಳು ಕವಿತಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here