ಬೆಳ್ತಂಗಡಿ: ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಕಳಿಯ ಗ್ರಾ. ಪಂ ನಲ್ಲಿಮೆಸ್ಕಾಮ್ ನಿಂದ ಗೃಹ ಜ್ಯೋತಿ 260 ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ

0

ಕಳಿಯ : ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯಕ್ರಮವು ಜು 28 ರಂದು ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಸುಮಾರು 260 ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು.ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಮರೀಟಾ ಪಿಂಟೋ ಉದ್ಘಾಟಿಸಿದರು. ಅಭಿವೃದ್ಧಿ ಅಧಿಕಾರಿ ಕುಂಞ ಕೆ ಸ್ವಾಗತಿಸಿದರು.

ಸಮಿತಿ ಸದಸ್ಯೆ ಸೌಮ್ಯ ಲಾಯಿಲ, ಕೇಶವ ಓಡಿಲ್ನಾಳ, ಮೆಸ್ಕಾಮ್ ನ ಶಿವಶಂಕರ್, ಶ್ವೇತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್,ಸದಸ್ಯೆ ವಂದನಾ ಭಂಡಾರಿ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ ಎಂ,ಕೇಶವ ಪೂಜಾರಿ ನಾಳ,ಮಾಜಿ ಉಪಾದ್ಯಕ್ಷೆ ಕುಸುಮ ಎನ್ ಬಂಗೇರ,ಮಾಜಿ ಸದಸ್ಯರಾದ ಸುಧಾಕರ ಮಜಲು ಮೋಹಿನಿ,ಹರೀಶ್ ಕುಮಾರ್,ಲತೀಫ್ ಪರಿಮ, ಶಕುಂತಲಾ ಬೇಟಿ ನೀಡಿದರು.ಮೆಸ್ಕಾಮ್ ನ ಹರೀಶ್ ಮತ್ತು ಸಿಬ್ಬಂದಿಗಳು,ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ, ನಂದಿನಿ,ರವಿ ಎಚ್, ಸುರೇಶ್ ಗೌಡ, ಗ್ರಂಥಾಲಯದ ಸಿಬ್ಬಂದಿ ಪ್ರಮೀಳಾ, ಸಂಜೀವಿನಿಯ ಚಂದ್ರಿಕಾ, ಪ್ರಜ್ಞಾ,ಸ್ಥಳೀಯರಾದ ಸಿದ್ದೀಕ್ ಜಿ.ಎಚ್, ರಹಿಮಾನ್ ಮಾಸ್ಟರ್ ಸಹಕರಿಸಿದರು.

LEAVE A REPLY

Please enter your comment!
Please enter your name here