ಧರ್ಮಸ್ಥಳ: ಎಸ್.ಡಿ.ಎಂ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

0

ಬೆಳ್ತಂಗಡಿ ರೋಟರಿ ಕ್ಲಬ್‌ನ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ 2026–27ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನೆರವೇರಿತು.

ರೋಟರಿಯ ಅಧಿಕೃತ ಪ್ರೋಟೋಕಾಲ್‌ನಂತೆ ನಡೆದ ಕಾರ್ಯಕ್ರಮವನ್ನು ಪದಗ್ರಹಣ ಅಧಿಕಾರಿ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್‌ನ ಮಾಜಿ ಕಾರ್ಯದರ್ಶಿ ರೊಟೇರಿಯನ್. ಪಿಎಚ್‌ಎಫ್. ಸಂದೇಶ್ ಕುಮಾರ್ ರಾವ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಟರಾಕ್ಟ್ ಕ್ಲಬ್‌ಗಳ ಅಧ್ಯಕ್ಷ ರೊಟೇರಿಯನ್, ಪ್ರವೀಣ್ ಗೋರೆ ಹಾಗೂ ರೊಟೇರಿಯನ್, ರೇಷ್ಮಾ ದಿವಾಕರ್ ಹೆಗ್ಡೆ ಉಪಸ್ಥಿತರಿದ್ದರು.

10ನೇ ತರಗತಿಯ ಕುಮಾರಿ ಅನುಜ್ಞಾ ಕಳೆದ ವರ್ಷದ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು.ನೂತನ ಪದಾಧಿಕಾರಿಗಳಾಗಿ ತೇಜಸ್ ಎಸ್ (10ನೇ ತರಗತಿ) ಅಧ್ಯಕ್ಷರಾಗಿ, ಅಮೀತ್ (9ನೇ ತರಗತಿ) ಉಪಾಧ್ಯಕ್ಷರಾಗಿ, ಓ.ಎಂ. ಅಲ್ಫಿನ್ (8ನೇ ತರಗತಿ) ಕಾರ್ಯದರ್ಶಿಯಾಗಿ ಮತ್ತು ನಿಧಿಕ್ಷಾ (10ನೇ ತರಗತಿ) ಕೋಶಾಧಿಕಾರಿಯಾಗಿ ಆಯ್ಕೆಯಾದರು.

ಪದಗ್ರಹಣ ಅಧಿಕಾರಿಗಳು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ನೂತನ ಅಧ್ಯಕ್ಷ ಶಾಲಾ ವಿದ್ಯಾರ್ಥಿ ತೇಜಸ್ ಎಸ್ ಅವರು ವರ್ಷದ ಕಾರ್ಯಯೋಜನೆಯನ್ನು ಪ್ರಸ್ತುತಪಡಿಸಿ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಗಳ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.”ಸೇವೆ ಮತ್ತು ನಾಯಕತ್ವದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ” ಎಂದು ಪದಗ್ರಹಣ ಅಧಿಕಾರಿ ಸಂದೇಶ್ ಕುಮಾರ್ ರಾವ್ ತಿಳಿ ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಬಳಿಕ ರೇಷ್ಮಾ ದಿವಾಕರ್ ಹೆಗ್ಡೆ ಅವರು “ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ” ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಕಾರಾತ್ಮಕ ಚಿಂತನೆಯ ಮಹತ್ವವನ್ನು ತಿಳಿದುಕೊಂಡರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು. 9ನೇ ತರಗತಿಯ ಶ್ರೇಯಾ ಡಿ.ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕಿ ಅನುಷಾ ಸ್ವಾಗತಿಸಿ ಶಾಲಾ ವಿದ್ಯಾರ್ಥಿ ಒ ಎಂ ಆಲ್ಪಿನ್ ಧನ್ಯವಾದ ಇತ್ತರು.

LEAVE A REPLY

Please enter your comment!
Please enter your name here