







ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ 2026-27 ನೇ ಸಾಲಿನ ಜು.25 ರಂದು ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಸಿಸ್ಟರ್ ಜುಲಿಯಾನ ಪಾಯಿಸ್ , ಉಪಕಾರ್ಯದರ್ಶಿ, ಅರ್ಸುಲೈನ್ ಫ್ರಾನ್ಸಿಸ್ಕನ್ ವಿದ್ಯಾಸಂಸ್ಥೆ ಇವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಅವಕಾಶ ನೀಡುವುದರಿಂದ ಅವರು ಪ್ರತಿಭಾವಂತರು ಹಾಗೂ ಬುದ್ಧಿವಂತರಾಗಿ ಬೆಳೆಯುತ್ತಾರೆ ಆದರೆ, ಅದರ ಬಳಕೆಯ ಸಂಪೂರ್ಣ ನಿಗಾವಹಿಸಿವುದು ಪೋಷಕರ ಜವಾಬ್ದಾರಿ ಎಂದು ಪೋಷಕರಿಗೆ ಕರೆಯಿತ್ತರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿಸ್ಟರ್ ಲಿಲ್ಲಿ ಪುಷ್ಪ, ಉಡುಪಿ ಜಿಲ್ಲೆಯ ಬಾಲ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಆಪ್ತ ಸಮಾಲೋಚಕಿ ಇವರು ವಿದ್ಯಾರ್ಥಿಗಳ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಆದ್ದರಿಂದ ರೋಗಿಗಳನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಅವರ ಸಂಪೂರ್ಣ ಆರೈಕೆ ಮಾಡುವಂತೆ, ನಮ್ಮ ಮಕ್ಕಳ ವರ್ತನೆಯಲ್ಲಿ ಕೂಡ ಪೋಷಕರು ನಿಗಾ ವಹಿಸುವಂತೆ ಪೋಷಕರಿಗೆ ಅರಿವು ಮೂಡಿಸಿದರು. ಕರ್ಯಕ್ರಮದಲ್ಲಿ ಆಡಳಿತ ಮಂಡಳಿಯು ನೀಡುವ ವಾರ್ಷಿಕ ದ್ಯೇಯ ವಾಕ್ಯ ‘ ಸ್ವಚ್ಛ ಪರಿಸರ, ಸ್ವಸ್ಥ ಜೀವನ’ ಉದ್ಘಾಟಿಸಿ, ಶಾಲಾ ಸ್ವಚ್ಛತಾ ಕರ್ಯದಲ್ಲಿ ಸಹಕರಿಸುತ್ತಿರುವ ಪೌರ ಕಾರ್ಮಿಕರನ್ನು ಕೃತಜ್ಞತಾ ಪೂರ್ವಕವಾಗಿ ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್ ಎಸ್ ಎಲಸ ಸಿ ಪರೀಕ್ಷಾ ಸಾಧಕರನ್ನು ಅಭಿನಂದಿಸಲಾಯಿತು. ಈ ಮಹಾಸಭೆಯಲ್ಲಿ ಪ್ರಸ್ತುತ ವರ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ನಿರೂಪನೆಯನ್ನು ಅಕ್ಷತಾ, ಸ್ವಾಗತ ಭಾಷಣ ಸಿಸ್ಟರ್ ಫಿಲೋಮಿನಾ ಹಾಗೂ ವಂದನಾರ್ಪನೆಯನ್ನು ಕವಿತಾ ಇವರು ನೆರವೇರಿಸಿ ಕೊಟ್ಟರು.









