







ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪದವಿ ವಿಭಾಗದ[ NEP] ಬಿ.ಕಾಂ ನ ಆರನೇ ಚತುರ್ಮಾಸದಲ್ಲಿ ಉತ್ತಮವಾದ ಫಲಿತಾಂಶ ದಾಖಲಾಗಿದ್ದು, ಆರನೇ ಚತುರ್ಮಾಸದಲ್ಲಿ ವಿದ್ಯಾರ್ಥಿನಿ ಫಾತಿಮಾ 95.84%. ಪ್ರಥಮ ಸ್ಥಾನ ಪಡೆದು, ಸಫಾ ತಸ್ಮಿಯ 95.38%. ದ್ವಿತೀಯ ಸ್ಥಾನ , ವಿದ್ಯಾರ್ಥಿನಿ ಸುಪ್ರಿಯಾ 94.92% ಫಲಿತಾಂಶವನ್ನು ಪಡೆದು ತೃತೀಯ ಸ್ಥಾನ, ಸುರಕ್ಷಾ 92.15% ಹಾಗೂ ತೃಷಾ 90%ವನ್ನು ಪಡೆದಿರುತ್ತಾರೆ.


ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಂಯೋಜಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ .









