ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ವರ್ಗಾವಣೆ ಬೆಳ್ತಂಗಡಿ ಆರ್ ಎಫ್ ಓ ಆಗಿ ಮಹೇಶ್ ದೇವಾಡಿಗ ಅಧಿಕಾರ ಸ್ವೀಕಾರ

0

ಬೆಳ್ತಂಗಡಿ : ಮಂಗಳೂರು ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ತ್ಯಾಗರಾಜ್‌ ಅವರನ್ನು ಬೆಂಗಳೂರು ಗ್ರೇಟರ್ ಪ್ರಾಧಿಕಾರ (ಕೇಂದ್ರ ವಲಯ) ಕ್ಕೆ ವರ್ಗಾವಣೆ ಮಾಡಲಾಗಿದ್ದು. ತೆರವಾದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಕ್ಯಾದಗಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ ದೇವಾಡಿಗ ಅವರನ್ನು ನೇಮಕ ಮಾಡಿ ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇ.28 ರಂದು ಆದೇಶ ಹೊರಡಿಸಿದ್ದರು.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಟಿ. ಎನ್. ತ್ಯಾಗರಾಜ್ ಅವರು ಕಳೆದ ಎರಡು ವರ್ಷಗಳಿಂದ ಬೆಳ್ತಂಗಡಿ ಆರ್ ಎಫ್ ಓ ಆಗಿ ಕರ್ತವ್ಯ ಸೇವೆ ಸಲ್ಲಿಸಿದ್ದರು.ಪ್ರಸ್ತುತ ವಲಯ ಅರಣ್ಯಾಧಿಕಾರಿ ಮಹೇಶ್‌ ಎಂ. ದೇವಾಡಿಗ ಅವರು ಜು.16 ರಂದು ಅಧಿಕಾರ ಸ್ವೀಕಾರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here