ಜೆಸಿಐ ಮಡಂತ್ಯಾರಿಗೆ ವಲಯ ಮಹಿಳಾ ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ ಹಾಗೂ ಮನ್ನಣೆಗಳು

0

ಜೆಸಿಐ ಭಾರತದ ವಲಯ 15 ರ ಬೈಂದೂರು ಸಿಟಿ ನೇತೃತ್ವದಲ್ಲಿ ನಡೆದ “ಲೇಡಿ ಜೇಸಿ ಹಾಗೂ ಜೆಜೆಸಿ ಕಾನ್ಫರೆನ್ಸ್” ನಲ್ಲಿ ಜೆಸಿಐ ಮಡಂತ್ಯಾರು ತಂಡ ಭಾಗವಹಿಸಿ ಹಲವಾರು ಪ್ರಶಸ್ತಿ, ಮನ್ನಣೆಗಳು ಹಾಗೂ ಬಹುಮಾನಕ್ಕೆ ಭಾಜನವಾಗಿದೆ.

ಟಾಪ್ 10 ಲೇಡಿ ಜೇಸಿ ಪ್ರಶಸ್ತಿಗಳಲ್ಲಿ‌ ಟಾಪ್ 6ನೇ ನಮ್ಮ ಲೇಡಿ ಜೇಸಿ ಸಂಯೋಜಕಿ ಜೇಸಿ ಭವ್ಯ ಟಿ. ಪೈಯವರಿಗೆ ಲಭಿಸಿದೆ. ಮಾಮ್ ಆ್ಯಂಡ್ ಮಿ ಕಾರ್ಯಕ್ರಮ ಮನ್ನಣೆ, ಪ್ರಯಾಸ್ ಡೇ ಮನ್ನಣೆ, ಶೆರೋಸ್ ಡೇ ಮನ್ನಣೆ, ಸಿಲ್ವರ್ ಸ್ಟಾರ್ ಪ್ರೆಸಿಡೆಂಟ್ ಜೆಎಸಿ ವಿಭಾಗದ ಮನ್ನಣೆ, ಬೆಂಕಿಯಿಲ್ಲದ ಅಡುಗೆ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಲಭಿಸಿದೆ.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾದ ಜೇಸಿ ತುಳಸಿದಾಸ್ ಪೈ, ಮಹಿಳಾ ಜೇಸಿ ಸಂಯೋಜಕಿ ಜೇಸಿ ಭವ್ಯ ಟಿ. ಪೈ, ಸದಾ ಕ್ರಿಯಾಶೀಲರಾಗಿರುವ ಜೇಸಿ ಅಶ್ವಿನಿ, ಜೆಜೆಸಿ ಅಧ್ಯಕ್ಷ ಜೆಜೆಸಿ ಕೃಪಾಲ್ ಅವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here