ಸೌತಡ್ಕ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡ ಡಿಆರ್‌ಎಂ ಯೋಗೀಶ್ ಭೇಟಿ

0

ಸೌತಡ್ಕ: ಬ್ಯಾಂಕ್ ಆಫ್ ಬರೋಡದ ಡಿಆರ್‌ಎಂ ಯೋಗೀಶ್ ಅವರು ಪತ್ನಿ ಸಮೇತರಾಗಿ ಸೌತಡ್ಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಬ್ಯಾಂಕ್ ಆಫ್ ಬರೋಡದ ಸಿಎಸ್‌ಆರ್ (CSR) ನಿಧಿಯಿಂದ ಅಗತ್ಯ ನೆರವು ನೀಡುವ ಭರವಸೆಯನ್ನು ಅವರು ನೀಡಿದರು.ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಹಾಗೂ ದೇವಸ್ಥಾನದ ಅರ್ಚಕರು ಯೋಗೀಶ್ ದಂಪತಿಯನ್ನು ಆತ್ಮೀಯವಾಗಿ ಸ್ವಾಗತಿಸಿ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here