ಜು.10 ಬೆಳ್ತಂಗಡಿಯಲ್ಲಿ ರೈತರಿಗೆ ವಿದ್ಯುತ್ ಸುರಕ್ಷತೆ ಕುರಿತು ತರಬೇತಿ

0

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿಯಲ್ಲಿ ಜು.10.ರಂದು ಪೂರ್ವಾಹ್ನ 10.00 ಗಂಟೆಯಿಂದ ದಕ್ಷಿಣಕನ್ನಡ ಜಿಲ್ಲೆಯ ರೈತರಿಗೆ ಇಂಧನ ಇಲಾಖೆಯ ಸೌಲಭ್ಯಗಳ ಮಾಹಿತಿ, ವಿವಿಧ ವಿದ್ಯುತ್ ಸಲಕರಣೆಗಳ ಸುರಕ್ಷತಾ ಬಳಕೆ, ನಿರ್ವಹಣೆ, ದುರಸ್ತಿ, ಮಳೆಗಾಲದಲ್ಲಿ ವಿವಿಧ ವಿಪತ್ತು ನಿರ್ವಹಣೆ ಹಾಗೂ ಮೊಬೈಲ್ Starter ತಂತ್ರಜ್ಞಾನ ದ ಬಗ್ಗೆ ಒಂದು ದಿನದ ಉಚಿತ ತರಬೇತಿಯನ್ನು ಹಮ್ಮಿಕೊಂಡಿದೆ.

ಉಜಿರೆ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಎಸ್‌ ನವೀನ್ ಕುಮಾ‌ರ್, ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಉಸ್ಮಾನ್, ಹಾಗೂ ಪುತ್ತೂರು ಮಾಯಾಟ್ರೋನಿಕ್ಸ್ ಶರತ್, ನಾಗೇಶ್ ಪಿ. ರಕ್ಷಾ ಎಂಟರ್ ಪ್ರೈಸಸ್ ಉಜಿರೆ ಇವರುಗಳು ತರಬೇತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here