ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ‘ಎಸ್.ಡಿ.ಎಂ. ಕುರಿತು ಒಳನೋಟ’ ವಿಶೇಷ ಉಪನ್ಯಾಸ ಕಾರ್ಯಕ್ರಮ

0

​ಉಜಿರೆ: ಸ್ಥಳೀಯ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ 2026-27ನೇ ಸಾಲಿನ ಪ್ರವೇಶೋತ್ಸವದ ಎರಡನೇ ದಿನವಾದ ಜುಲೈ 1ರಂದು, ಕಾಲೇಜಿನ ವರ್ಕ್‌ಶಾಪ್ ಸೆಮಿನಾರ್ ಹಾಲ್‌ನಲ್ಲಿ ‘ಎಸ್.ಡಿ.ಎಂ. ಕುರಿತು ಒಳನೋಟ (An Insight to SDM)’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.​

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ನಿರ್ದೇಶಕ ಪ್ರದೀಪ್ ಶೆಟ್ಟಿ ಅವರು, ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ಸಂಸ್ಥೆಯ ಭವ್ಯ ಪರಂಪರೆ, ಧ್ಯೇಯೋದ್ದೇಶಗಳು ಮತ್ತು ಸಮಾಜಮುಖಿ ಸೇವಾ ತತ್ವಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.​

‘ಚತುರ್ಧಾನ’ ಸಂಸ್ಕೃತಿಯ ಮಹತ್ವತಮ್ಮ ಉಪನ್ಯಾಸದಲ್ಲಿ ಸಂಸ್ಥೆಯ ಮೂಲಮಂತ್ರವಾದ ‘ಚತುರ್ಧಾನ’ ಸಂಸ್ಕೃತಿಯನ್ನು ವಿವರಿಸಿದ ಶ್ರೀ ಪ್ರದೀಪ್ ಶೆಟ್ಟಿ ಅವರು, ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಹಾಗೂ ಅಭಯದಾನ ಎಂಬ ನಾಲ್ಕು ಮೌಲ್ಯಗಳ ಮೂಲಕ ಧರ್ಮಸ್ಥಳ ಸಂಸ್ಥೆಯು ಸಮಾಜ ಸೇವೆ, ಮಾನವೀಯ ಮೌಲ್ಯಗಳ ಬಿತ್ತುವಿಕೆ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಲ್ಲಿಸುತ್ತಿರುವ ಅನುಪಮ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.​

ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತುಸಂಸ್ಥೆಯ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಎಸ್.ಡಿ.ಎಂ.ನ ಆದರ್ಶಗಳನ್ನು ಜೀವನದ ದಾರಿದೀಪವಾಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ಕಾರ್ಯಕ್ರಮದ ಭಾಗವಾಗಿ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಶೆಟ್ಟಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.​

ಈ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂಸ್ಥೆಯ ಸೇವಾ ಪರಂಪರೆ ಮತ್ತು ಮೌಲ್ಯಾಧಾರಿತ ಶಿಕ್ಷಣದ ಕುರಿತು ಆಳವಾದ ಅರಿವನ್ನು ಮೂಡಿಸಿತು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಈಶ್ವರ್ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here