







ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ, ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ 350 ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಮತ್ತು ಬ್ಯಾಗು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕದ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇದು ಸಂಸ್ಥೆಯ 586ನೇ ಸೇವಾ ಯೋಜನೆಯಾಗಿದೆ. ಈ ಕಾರ್ಯಕ್ರಮವು ಇದೇ ಬರುವ ಜುಲೈ 12, 2026ರ ಭಾನುವಾರದಂದು ಕುತ್ತ್ಯಾರು ಹೊಸಮನೆ ಶ್ರೀ ಸಹ ಪರಿವಾರ ನಾಗಬ್ರಹ್ಮಾದಿ ಕ್ಷೇತ್ರ ರೆಂಕೆದಗುತ್ತು ಇಲ್ಲಿ ನಡೆಯಲಿದೆ.


ಅಧ್ಯಕ್ಷತೆ: ಜಗದೀಶ್ ಲಾಯಿಲ, ಅಧ್ಯಕ್ಷರು, ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು.ಸಭಾಧ್ಯಕ್ಷತೆ: ಹರೀಶ್ ಪೂಂಜಾ, ಮಾನ್ಯ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ.ಉದ್ಘಾಟನೆ: ಸಂಪತ್ ಬಿ. ಸುವರ್ಣ, ಅಧ್ಯಕ್ಷರು, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ.ಗಣ್ಯ ಅತಿಥಿಗಳು:ಕಾರ್ಯಕ್ರಮದಲ್ಲಿ ಹರೀಶ್ ಕುಮಾರ್ (ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಮಂಡಳಿ), ಕಿರಣ್ ಚಂದ್ರ ಡಿ. ಪುಷ್ಪಗಿರಿ (ಧಾರ್ಮಿಕ ಮುಖಂಡರು), ಕಿಶೋರ್ ಗೌಡ (ಪಿಎಸ್‌ಐ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ), ಜಯಾನಂದ ಗೌಡ (ಮಾಜಿ ಅಧ್ಯಕ್ಷರು, ನಗರ ಪಂಚಾಯತ್), ಪ್ರವೀಣ್ ಫರ್ನಾಂಡಿಸ್ (ಮಾಲಕರು, ಹಳ್ಳಿ ಮನೆ ಉಜಿರೆ), ಸುಂದರ್ ರೈ ಮಂದಾರ (ಖ್ಯಾತ ರಂಗಭೂಮಿ ಕಲಾವಿದರು), ತುಕಾರಾಮ್ ಬಿ. (ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ), ಮನೋಹರ್ ಬಳಂಜ (ಅಧ್ಯಕ್ಷರು, ಬಳಂಜ ಶಿಕ್ಷಣ ಟ್ರಸ್ಟ್/ವರದಿಗಾರರು, ವಿಜಯವಾಣಿ), ಸಿದ್ದಿಕ್ ಕೆಂಪಿ ಉಪ್ಪಿನಂಗಡಿ (ಜಿಲ್ಲಾಧ್ಯಕ್ಷರು, ಖಾಸಗಿ ಬಸ್ ನೌಕರರ ಸಂಘ), ಸಿರಿಲ್ ಡಿಸೋಜ (ಮಾಲಕರು, ಸಂಗಮ್ ಸ್ಟೋರ್ ರೆಂಕೆದಗುತ್ತು) ಹಾಗೂ ದಿನೇಶ್ ಶೆಟ್ಟಿ (ಜ್ಯೂಸ್ ಜಂಕ್ಷನ್, ಬೆಳ್ತಂಗಡಿ) ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶರತ್ ಕರಾಯ ಮುಂತಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರು, “ನಮ್ಮ ಟ್ರಸ್ಟ್ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸ್ವಚ್ಛತಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಕಳೆದ ಸಾಲಿನಲ್ಲಿ 300 ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗುಗಳನ್ನು ವಿತರಿಸಿದ್ದೆವು. ಈ ಬಾರಿ ಅದರ ಸಂಖ್ಯೆಯನ್ನು ಹೆಚ್ಚಿಸಿ, 350 ಮಕ್ಕಳಿಗೆ ಸಹಾಯಹಸ್ತ ಚಾಚುತ್ತಿದ್ದೇವೆ,” ಎಂದು ತಿಳಿಸಿದ್ದಾರೆ..









