ಜುಲೈ 6ರಂದು ‘ಶ್ರೀ ಕೃಷ್ಣ ಫ್ಯಾಮಿಲಿ ವೆಜಿಟೇರಿಯನ್ ರೆಸ್ಟೋರೆಂಟ್’ ಹಾಗೂ ‘ಸುದಾಮ ಗಾರ್ಡನ್’ ಭವ್ಯ ಉದ್ಘಾಟನೆ

0

ಗುರುವಾಯನಕೆರೆ, ಜು. 3: ಗುರುವಾಯನಕೆರೆಯ ಅಯ್ಯಪ್ಪ ನಗರ, ಶಾರದಾ ಮಂದಿರದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ‘ಶ್ರೀ ಕೃಷ್ಣ ಫ್ಯಾಮಿಲಿ ವೆಜಿಟೇರಿಯನ್ ರೆಸ್ಟೋರೆಂಟ್’ ಹಾಗೂ **’ಸುದಾಮ ಗಾರ್ಡನ್’**ನ ಭವ್ಯ ಉದ್ಘಾಟನಾ ಸಮಾರಂಭವು ಜುಲೈ 6ರಂದು (ಸೋಮವಾರ) ಸಂಜೆ 7 ಗಂಟೆಗೆ ನಡೆಯಲಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯುವ ಈ ಸಮಾರಂಭವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾದ ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆಯ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.ಈ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಚೈನೀಸ್, ಚಾಟ್ಸ್, ತಾಜಾ ಜ್ಯೂಸ್, ಮೀಲ್ಸ್ ಹಾಗೂ ವಿವಿಧ ಬಗೆಯ ಸಸ್ಯಾಹಾರಿ ತಿಂಡಿಗಳು ಗ್ರಾಹಕರಿಗೆ ಲಭ್ಯವಿರಲಿವೆ.ಇದರೊಂದಿಗೆ ‘ಸುದಾಮ ಗಾರ್ಡನ್’ ಹೆಸರಿನ 50 ಆಸನಗಳ ಓಪನ್ ಪಾರ್ಟಿ ಏರಿಯಾ ಕೂಡ ಆರಂಭಗೊಳ್ಳುತ್ತಿದ್ದು, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಾಮಕರಣ, ಕುಟುಂಬ ಸಮಾರಂಭಗಳು ಹಾಗೂ ಇತರ ಶುಭ ಸಮಾರಂಭಗಳನ್ನು ಆಯೋಜಿಸಲು ಅತ್ಯುತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here