ಬೆಳ್ತಂಗಡಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ಶ್ರೀಧರ್ ಕೆ. ವಿ. ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಉಜಿರೆ : ಬೆಳ್ತಂಗಡಿ ರೋಟರಿ ಕ್ಲಬ್ ನ 56 ನೇ ವರ್ಷದ ನೂತನ ಅಧ್ಯಕ್ಷ ಶ್ರೀಧರ್ ಕೆ. ವಿ. ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.2 ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ರೋಟರಿ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ಪದಪ್ರಧಾನ ಮಾಡಿ ಶುಭ ಹಾರೈಸಿದರು. ಜಿಲ್ಲಾ ಸಹಾಯಕ ಗವರ್ನರ್ ಡಾ. ಶಶಿಧರ ಡೋಂಗ್ರೆ, ವಲಯ ಸೇನಾನಿ ಬೇಬಿ ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.

ನೂತನ ಪದಾಧಿಕಾರಿಗಳಾದ ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ, ಖಜಾಂಚಿಯಾಗಿ ರೊ. ಅಬೂಬ್ಬಕ್ಕರ್, ದಂಡಪಾಣಿಯಾಗಿ ರೊ. ವೈಕುಂಠ ಪ್ರಭು, ಹಾಗೂ ನಿರ್ದೇಶಕರಾಗಿ ವಿದ್ಯಾ ಕುಮಾರ್ ಕಾಂಚೋಡು , ಅನಂತ ಭಟ್‌ ಮಚ್ಚಿಮಲೆ, ಗಾಯತ್ರಿ ದಿನೇಶ್‌, ಮನೋರಮಾ ಭಟ್, ಪೂರನ್ ವರ್ಮ, ಕಿರಣ್ ಹೆಬ್ಬಾರ್, ಸಂದೇಶ್‌ ರಾವ್‌, ಡಾ.ಜಯಕುಮಾ‌ರ್ ಶೆಟ್ಟಿ, ಅರುಣ್‌ ಕುಮಾ‌ರ್ ಎಂ. ಎಸ್. , ಬಿ.ಕೆ. ಧನಂಜಯ ರಾವ್,ಮೆಜರ್ ಜನರಲ್,ಎಂ.ವಿ.ಭಟ್, ಪ್ರವೀಣ್ ಗೋರೆ, ಡಾ.ಶಶಿಕಾಂತ್ ಡೋಂಗ್ರೆ ಡಾ.ಗೋಪಾಲಕೃಷ್ಣ ಭಟ್,ಡಾ.ಗೋವಿಂದ ಕಿಶೋರ್, ಯಶವಂತ ಪಟವರ್ಧನ್, ಡಿ.ಎಂ.ಗೌಡ, ಶರತಕೃಷ್ಣ ಪಡುವೆಟ್ನಾಯ, ಆದರ್ಶ ಕಾರಂತ್, ಸೋಮಶೇಖರ ಶೆಟ್ಟಿ, ವೆಂಕಟೇಶ್ವರ ಭಟ್ ರೇಷ್ಮಾಹೆಗ್ಡೆ ಡಾ.ಎಂ.ಎಂ.ದಯಾಕರ್ ಇವರುಗಳಿಗೆ ರೋಟರಿ ಜಿಲ್ಲೆಯ ಗವರ್ನರ್ ರೊ.ಯಶಸ್ವಿ ಸೋಮಶೇಖ‌ರ್ ಪ್ರಮಾಣ ವಚನ ಭೋಧಿಸಿದರು.

ಇದೆ ಸಂದರ್ಭದಲ್ಲಿ ಡಾ. ಗೋವಿಂದ ಕಿಶೋರ್ ಚಿರಂತನ ಚಾರಿಟೇಬಲ್ ಟ್ರಸ್ಟ್ ಗೆ ರೂ. 50ಸಾವಿರ ದೇಣಿಗೆ, ನೆರಿಯ ಸಿಯೋನ್ ಆಶ್ರಮಕ್ಕೆ ಆಶಾ ಪೆದಮಲೆ ದೇಣಿಗೆ ಹಸ್ತಾಂತರ ಮಾಡಿದರು. ಉಜಿರೆ ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ ಭಟ್ ಮತ್ತು ಡಾ. ಭಾರತಿ ಭಟ್ ಮಾಚಾರು ಬದನಾಜೆಯ ವಿಕಲ ಚೇತನ ವಿದ್ಯಾರ್ಥಿನಿ ಶಮ ಇವರಿಗೆ ಉಪಕರಣ ನೀಡಿದರು.

ರೋಟರಿ ಇಂಟರಾಕ್ಟ್ ಪ್ರತಿನಿಧಿಯಾಗಿ ಆಯ್ಕೆಯಾದ ಉಜಿರೆಯ ಕ್ಷಿತಿಜ್ ಶೆಟ್ಟಿ ಮತ್ತು ನೂತನವಾಗಿ ಸೇರ್ಪಡೆ ಗೊಂಡ 3 ಮಂದಿ ಸದಸ್ಯರನ್ನು ಹಾಗೂ ರೋಟರಿ ಕ್ಲಬ್ ಗೆ ದೇಣಿಗೆಯನ್ನು ನೀಡಿದ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸಾಕ್ಷಿ ಹೆಬ್ಬಾರ್ ಪ್ರಾರ್ಥನೆ ಗೈದರು. ರೋಟರಿ ಕ್ಲಬ್‌ ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಪ್ರಭು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್ ವರದಿ ವಾಚಿಸಿ ನೂತನ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.

ಜಯಕುಮಾರ್ ಶೆಟ್ಟಿ ಮತ್ತು ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ವಿವಿಧ ರೋಟರಿ ಕ್ಲಬ್ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here