ಬೆಳ್ತಂಗಡಿ: ಮಹಿಳಾ ಸಬಲೀಕರಣದ ಅಂಗವಾಗಿ ಲಿಂಗ ಸಮಾನತೆಯ ಕುರಿತು ಕಾರ್ಯಾಗಾರ

0

​ಬೆಳ್ತಂಗಡಿ: ಮಹಿಳಾ ಸಬಲೀಕರಣದ ಭಾಗವಾಗಿ, ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ.) ವತಿಯಿಂದ ಲಿಂಗ ಸಮಾನತೆಯ ಕುರಿತು ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.​

ಬೆಳ್ತಂಗಡಿಯ ಸಂತೋಮ್ ಟವರ್‌ನಲ್ಲಿರುವ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ, ಸಂಸ್ಥೆಯ ನಿರ್ದೇಶಕರಾದ ಫಾ. ಆದರ್ಶ ಜೋಸೆಫ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿದರು.​

ಮಂಗಳೂರಿನ ಅಡ್ವೊಕೇಟ್ ಸಿಸ್ಟರ್ ಸೌಮ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಲಿಂಗ ಸಮಾನತೆಯ ಅಗತ್ಯತೆ, ಮಹಿಳೆಯರ ಹಕ್ಕುಗಳು ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳ ಕುರಿತು ಉಪಯುಕ್ತ ಮಾಹಿತಿ ಹಾಗೂ ತರಬೇತಿಯನ್ನು ನೀಡಿದರು.​

LEAVE A REPLY

Please enter your comment!
Please enter your name here